ಪರಿಸರ ಸಂರಕ್ಷಣೆಗೆ ವೈಜ್ಞಾನಿಕ ಅಧ್ಯಯನ ಅಗತ್ಯ: ಸುರೇಶ ಹೆಬ್ಳೀಕರ್

ಮಂಗಳವಾರ, ಜೂನ್ 18, 2019
24 °C

ಪರಿಸರ ಸಂರಕ್ಷಣೆಗೆ ವೈಜ್ಞಾನಿಕ ಅಧ್ಯಯನ ಅಗತ್ಯ: ಸುರೇಶ ಹೆಬ್ಳೀಕರ್

Published:
Updated:
Prajavani

ಹುಬ್ಬಳ್ಳಿ: ‘ರಾಣೆಬೆನ್ನೂರಿನಿಂದ ಬೆಳಗಾವಿವರೆಗಿನ ಭೂಪ್ರದೇಶ ಜೀವ ವೈವಿಧ್ಯಮಯದ ಸೂಕ್ಷ್ಮ ಪರಿಸರ ಹೊಂದಿದ್ದು, ಅದನ್ನು ಕಾಪಾಡಿಕೊಂಡು ಹೋಗಲು ಜನರು ಮುಂದಾಗಬೇಕು’ ಎಂದು ಪರಸರವಾದಿ ಸುರೇಶ ಹೆಬ್ಳೀಕರ್ ಹೇಳಿದರು.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪರಿಸರ ಸಂರಕ್ಷಣೆ ಮತ್ತು ಸುರಕ್ಷತೆ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಜಗತ್ತಿನ ಅತಿ ಅಪರೂಪದ ಭೂ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಗಳು ಸೇರಿವೆ. ಕುರುಚಲು ಕಾಡು, ನದಿ, ಹಳ್ಳ, ತೊರೆ, ಅರೆ ಮಲೆನಾಡು, ಮಲೆನಾಡು ಪ್ರದೇಶಗಳನ್ನು ಈ ಪ್ರದೇಶ ಹೊಂದಿದೆ. ಜಗತ್ತಿನ ಅಪರೂಪದ ಭೂ ಪ್ರದೇಶ ಇದಾಗಿದೆ’ ಎಂದರು.

‘ಜಗತ್ತಿನಾದ್ಯಂತ ಪ್ಲಾಸ್ಟಿಕ್ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ನದಿ, ಸಮುದ್ರ, ಬೀದಿ ಹೀಗೆ ಎಲ್ಲೆಂದರಲ್ಲಿ ಅದರದ್ದೇ ಕಾರುಬಾರು. ಪ್ಲಾಸ್ಟಿಕ್‌ ಇಲ್ಲದ ಜಗತ್ತೇ ಇಲ್ಲ ಎನ್ನುವಂತಾಗಿದೆ. ಇಂದಿನ ತಾಂತ್ರಿಕ ದಿನಗಳಲ್ಲಿ ಪ್ಲಾಸ್ಟಿಕ್‌ ನಿರ್ಮೂಲನೆಗೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು’ ಎಂದು ಹೇಳಿದರು.

‘ದಕ್ಷಿಣ ಭಾರತದಲ್ಲಿ 40 ವರ್ಷಗಳ ಹಿಂದೆ 60 ನದಿಗಳು ಹರಿಯುತ್ತಿದ್ದವು. ಅಭಿವೃದ್ಧಿ ನೆಪದಲ್ಲಿ ಬಹುತೇಕ ನದಿಗಳು ಮಾಯವಾಗಿವೆ. ರಸ್ತೆ ಅಗಲೀಕರಣಕ್ಕಾಗಿ ಲಕ್ಷಾಂತರ ಮರಗಳನ್ನು ಕಡಿಯಲಾಗಿದೆ. ಪರಿಣಾಮ ಹಸಿರು ಎನ್ನುವುದು ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಬದುಕು ದುಸ್ತರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ 33 ಕಬ್ಬಿನ ಫ್ಯಾಕ್ಟರಿಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳಿಗೆ ಲಕ್ಷಾಂತರ ಲೀಟರ್‌ ನೀರು ಅಗತ್ಯವಿದೆ. ಅದರ ಬದಲು, ತೋಟಗಾರಿಕೆ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕು. ಪರಿಸರ ಉಳಿವಿಗಾಗಿ ಯುವ ಜನತೆ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

ಕೆಸಿಸಿಐ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ತೋಟಗಾರಿಕೆ ಇಲಾಖೆ ಉಪ ಸಮಿತಿ ಮುಖ್ಯಸ್ಥ ಬಿ.ಬಿ. ಪಾಟೀಲ, ವಿನಯ ಜವಳಿ, ವಸಂತ ಲದ್ವಾ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !