ಕೃಷಿ: ಖಾಸಗಿ ಹೂಡಿಕೆಗೆ ಅವಕಾಶ

ಭಾನುವಾರ, ಜೂನ್ 16, 2019
22 °C
ಗುತ್ತಿಗೆ ಕೃಷಿ ಕಾನೂನಿಗೆ ತಿದ್ದುಪಡಿ

ಕೃಷಿ: ಖಾಸಗಿ ಹೂಡಿಕೆಗೆ ಅವಕಾಶ

Published:
Updated:

ಬೆಂಗಳೂರು: ಕಾರ್ಪೊರೇಟ್‌ ಮತ್ತು ಖಾಸಗಿ ಕಂಪನಿಗಳು ಕೃಷಿಯಲ್ಲಿ ತೊಡಗಲು ಸಹಾಯಕವಾಗುವ ಸಾಮೂಹಿಕ ಮತ್ತು ಗುತ್ತಿಗೆ ಕೃಷಿ ಪದ್ಧತಿ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್‌. ಶಿವಶಂಕರರೆಡ್ಡಿ ತಿಳಿಸಿದರು.

ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಜಾರಿಯಲ್ಲಿದ್ದು, ಅದರಲ್ಲಿ ಕೆಲವು ತಿದ್ದುಪಡಿಗಳನ್ನು ತರಲಾಗುವುದು. ಗುತ್ತಿಗೆ ಒಪ್ಪಂದ ಮಾಡಿಕೊಳ್ಳುವ ಕಂಪನಿಯ ಜತೆಗೆ ರೈತರು ಸಾಮೂಹಿಕ ಕೃಷಿಯಲ್ಲಿ ತೊಡಗಬಹುದು ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಕಂಪನಿಗಳು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸಬಹುದು. ಕೃಷಿಗೆ ಅಗತ್ಯವಿರುವ ಬಂಡವಾಳ, ಕೃಷಿ ಉಪಕರಣಗಳು, ಬಿತ್ತನೆ ಬೀಜ, ರಸಗೊಬ್ಬರದಿಂದ ಹಿಡಿದು ಎಲ್ಲ ವ್ಯವಸ್ಥೆಗಳನ್ನೂ ಕಂಪನಿಗಳೇ ಮಾಡುತ್ತವೆ. ಕೊನೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯನ್ನೂ ಈ ಕಂಪನಿಗಳೂ ಮಾಡುತ್ತವೆ. ನಿಶ್ಚಿತ ಆದಾಯವೂ ರೈತರಿಗೆ ಸಿಗುತ್ತದೆ ಎಂದು ಅವರು ಹೇಳಿದರು.

ಕೃಷಿ ಭೂಮಿಯ ಹಕ್ಕು ಮತ್ತು ಒಡೆತನ ರೈತರದ್ದೇ ಆಗಿರುತ್ತದೆ. ಖಾಸಗಿ ಕಂಪನಿಗಳು ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ‍ಪಡೆದು ಕೃಷಿ ನಡೆಸುತ್ತವೆ. ಒಂದೆರಡು ಗ್ರಾಮಗಳ ಆಸಕ್ತ ರೈತರು ಒಂದುಗೂಡಿ ಇಂತಹ ವ್ಯವಸಾಯ ಮಾಡಲು ಇಚ್ಛೆಪಟ್ಟರೆ, ಕಂಪನಿಗಳ ಜತೆಗೆ  ಒಪ್ಪಂದ ಮಾಡಿಕೊಳ್ಳಬಹುದು. ಯಾವುದೇ ರೈತರ ಮೇಲೂ ಒತ್ತಡ ಇಲ್ಲ. ಇಚ್ಛೆ ಇದ್ದರೆ ಪಾಲ್ಗೊಳ್ಳಬಹುದು. ಇಲ್ಲವಾದರೆ ಬಿಡಬಹುದು. ಇಸ್ರೇಲ್‌ನಲ್ಲೂ ಈ ರೀತಿಯ ಕೃಷಿಪದ್ಧತಿ ಇದೆ ಎಂದು ಶಿವಶಂಕರರೆಡ್ಡಿ ಹೇಳಿದರು.

ಕೃಷಿಯು ಕೈಗಾರಿಕೆಯಾಗಿ ರೂಪಾಂತರಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗುತ್ತದೆ. ಇದಕ್ಕಾಗಿ ಒಂದು ನೀತಿಯನ್ನೂ ರೂಪಿಸಲಾಗುವುದು ಎಂದೂ ಅವರು ಹೇಳಿದರು. 

* ಸಿರಿ ಧಾನ್ಯ ಉತ್ತೇಜನಕ್ಕಾಗಿ ‘ರೈತಸಿರಿ’ ಕಾರ್ಯಕ್ರಮದಡಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ₹ 10 ಸಾವಿರ ಅನುದಾನ.

* ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ಸಾವಯವ ಉತ್ಪನ್ನಗಳ ಪ್ಯಾಕಿಂಗ್‌ ಮತ್ತು ಬ್ರ್ಯಾಂಡಿಂಗ್‌ ಘಟಕಗಳಿಗೆ ಪ್ರೋತ್ಸಾಹ ಧನ.

* ಬೆಂಗಳೂರಿನಲ್ಲಿ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಫಾರ್‌ ಆರ್ಗ್ಯಾನಿಕ್ಸ್‌ ಅಂಡ್‌ ಮಿಲೆಟ್ಸ್‌’(ಸಾವಯವ, ಸಿರಿಧಾನ್ಯಗಳ ಹಬ್‌) ಸ್ಥಾಪನೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !