ಮಹಾರಾಷ್ಟ್ರದ ಕಾರ್ತಿಕೇಯ ಪ್ರಥಮ

ಗುರುವಾರ , ಜೂನ್ 20, 2019
26 °C
ಜೆಇಇ ಅಡ್ವಾನ್ಸ್‌ ಫಲಿತಾಂಶ

ಮಹಾರಾಷ್ಟ್ರದ ಕಾರ್ತಿಕೇಯ ಪ್ರಥಮ

Published:
Updated:
Prajavani

ನವದೆಹಲಿ (ಪಿಟಿಐ): ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ಪಡೆಯಲು ನಡೆದ ಜಂಟಿ ಉನ್ನತ ಪ್ರವೇಶ ಪರೀಕ್ಷೆಯ (ಜೆಇಇ–ಅಡ್ವಾನ್ಸ್‌) ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಮಹಾರಾಷ್ಟ್ರದ ಗುಪ್ತಾ ಕಾರ್ತಿಕೇಯ ಚಂದ್ರೇಶ್‌ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ. 

ಗುಪ್ತಾ ಕಾರ್ತಿಕೇಯ 372ಕ್ಕೆ 346 ಅಂಕ ಗಳಿಸಿದ್ದಾರೆ. ಒಟ್ಟು 1,61,319 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 38,705 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 5,356 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.  ಅಲಹಾಬಾದ್‌ನ ಹಿಮಾಂಶು ಗೌರವ್‌ ಸಿಂಗ್‌ 340 ಅಂಕ ಪಡೆದು ಎರಡನೇ ಹಾಗೂ, ದೆಹಲಿಯ ಅರ್ಚಿತ್‌ ಬುಬ್ನಾ 335 ಅಂಕ ಪಡೆದು ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ಶಬ್ನಮ್ ಸಹಯ್ 372ಕ್ಕೆ 308 ಅಂಕ ಗಳಿಸುವ ಮೂಲಕ ಮೊದಲಿಗರಾಗಿದ್ದಾರೆ. 

ಸಾಮಾನ್ಯ ವರ್ಗದ 15,566 ವಿದ್ಯಾರ್ಥಿ ಗಳು ಆರ್ಥಿಕವಾಗಿ ಹಿಂದುಳಿದ 3,636 ವಿದ್ಯಾರ್ಥಿಗಳು, ಇತರ ಹಿಂದುಳಿದ ವರ್ಗ(ಒಬಿಸಿ) ವರ್ಗಕ್ಕೆ ಸೇರಿದ್ದ 7,651 ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿಯ 8,758, ಪರಿಶಿಷ್ಟ ಪಂಗಡದ  3,094 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 

ಜೆಇಇ ಅಡ್ವಾನ್ಸ್‌ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ವಿಳಂಬವಾಯಿತು. ಫಲಿತಾಂಶ ಪ್ರಕಟಣೆಗೆ ವಿಳಂಬವಾಗಿರುವುದಕ್ಕೆ ಐಐಟಿ ರೂರ್ಕಿ ವಿಷಾದ ವ್ಯಕ್ತಪಡಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !