ಅನುದಾನ ಹಂಚಿಕೆ: ತಾರತಮ್ಯ ನಡೆದಿಲ್ಲ : ಮೇಯರ್‌ ಪುಷ್ಪಲತಾ

ಗುರುವಾರ , ಜೂಲೈ 18, 2019
23 °C

ಅನುದಾನ ಹಂಚಿಕೆ: ತಾರತಮ್ಯ ನಡೆದಿಲ್ಲ : ಮೇಯರ್‌ ಪುಷ್ಪಲತಾ

Published:
Updated:
Prajavani

ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ಅನುದಾನ ಹಂಚಿಕೆಯಲ್ಲಿ ಸದಸ್ಯರ ನಡುವೆ ಯಾವುದೇ
ತಾರತಮ್ಯ ಎಸಗಿಲ್ಲ ಎಂದು ಮೇಯರ್‌ ಪುಷ್ಪಲತಾ ಜಗನ್ನಾಥ್‌ ಅವರು ಸ್ಪಷ್ಟಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನಾಲ್ಕನೇ ಹಣಕಾಸು ಯೋಜನೆಯ ಅನು
ದಾನ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಸಂಸದ ಪ್ರತಾಪ ಸಿಂಹ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.

ಅನುದಾನ ಹಂಚಿಕೆಯನ್ನು ಸ್ಥಾಯಿ ಸಮಿತಿಗಳು ನಿರ್ಧರಿಸುತ್ತವೆ. ಸಮಿತಿಗಳಲ್ಲಿ ಎಲ್ಲ ಪಕ್ಷದ ಸದಸ್ಯರೂ ಇರುವರು. ಆದ್ದರಿಂದ ಅನುದಾನ ನಿಗದಿಪಡಿಸುವಾಗ ಬಿಜೆಪಿ ಸದಸ್ಯರ ಒಪ್ಪಿಗೆಯನ್ನೂ ಪಡೆಯಲಾಗುತ್ತದೆ ಎಂದು ಹೇಳಿದರು.

14ನೇ ಹಣಕಾಸು ಯೋಜನೆ ಪ್ರಕಾರ ಹಿರಿಯ ಸದಸ್ಯರ ವಾರ್ಡ್‌ಗಳಿಗೆ ₹ 1 ಕೋಟಿಯಿಂದ ₹ 1.25 ಕೋಟಿ ಅನುದಾನ ನೀಡಲಾಗಿದೆ. ಹಿರಿಯ ಸದಸ್ಯರು ಯಾವುದೇ ಪಕ್ಷದವರಾಗಿದ್ದರೂ, ನಿಗದಿತ ಅನುದಾನ ಅವರಿಗೆ ಲಭಿಸುತ್ತದೆ. ಇಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಹಿರಿಯ ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿದರು.

ಕ್ಷಮೆಯಾಚಿಸಲಿ: ಉಪ ಮೇಯರ್ ಶಫಿ ಅಹಮದ್ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಸರ್ಕಾರವೇ ನಿಗದಿಪಡಿಸಿರುತ್ತದೆ. ಇದರಲ್ಲಿ ಪಾಲಿಕೆಯ ಪಾತ್ರವಿರುವುದಿಲ್ಲ. ಪಾಲಿಕೆಯ ಅನುದಾನ ಹಂಚಿಕೆ ಕುರಿತು ಸಂಸದರು ಆರೋಪ ಮಾಡಿರುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸಲು ಎಂದು ಒತ್ತಾಯಿಸಿದರು.

ಸದಸ್ಯರಾದ ನಾಗರಾಜು, ರಮೇಶ್, ಶೋಭಾ ಸುನಿಲ್, ಪ್ರೇಮಾ ಶಂಕರೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !