ಕಸ ನಿರ್ವಹಣೆ– ಪರಿಶಿಷ್ಟರಿಗೆ ಸಿಕ್ಕಿಲ್ಲ ಗುತ್ತಿಗೆ

ಗುರುವಾರ , ಜೂನ್ 20, 2019
24 °C
ಬಿಬಿಎಂಪಿಯಿಂದ ಮೀಸಲಾತಿ ನಿಯಮ ಉಲ್ಲಂಘನೆ– ಆರೋಪ

ಕಸ ನಿರ್ವಹಣೆ– ಪರಿಶಿಷ್ಟರಿಗೆ ಸಿಕ್ಕಿಲ್ಲ ಗುತ್ತಿಗೆ

Published:
Updated:

ಬೆಂಗಳೂರು: ‘ಬಿಬಿಎಂಪಿ ಕಸ ನಿರ್ವಹಣೆ ಗುತ್ತಿಗೆ ಟೆಂಡರ್‌ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿಲ್ಲ’ ಎಂದು ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪೌರಕಾರ್ಮಿಕರ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆ ಅಧ್ಯಕ್ಷ ಸುಬ್ಬರಾಯುಡು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೆಟಿಪಿಪಿ ಕಾಯ್ದೆಯ ಕಲಂ 6ರ ತಿದ್ದುಪಡಿಯ ಬಳಿಕ, ರಾಜ್ಯದಲ್ಲಿ ₹ 50 ಲಕ್ಷ ಮೀರದ ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಶೇ 24.10 ರಷ್ಟು ಮೀಸಲಾತಿ ನೀಡಬೇಕು. ಆ ಪ್ರಕಾರ ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ 48 ವಾರ್ಡ್‌ಗಳ ಕಸ ವಿಲೇವಾರಿ ಗುತ್ತಿಗೆಯನ್ನು ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರಿಗೆ ನೀಡಬೇಕಿತ್ತು’ ಎಂದರು.

‘ಟೆಂಡರ್‌ನಲ್ಲಿ ತಿಂಗಳ ನಿರ್ವಹಣೆ ವೆಚ್ಚದ ಬದಲು ವಾರ್ಷಿಕ ಮೊತ್ತವನ್ನು ನಮೂದಿಸುವ ಮೂಲಕ ದಲಿತ ಗುತ್ತಿಗೆದಾರರನ್ನು ಈ ಪ್ರಕ್ರಿಯೆಯಿಂದ ಹೊರಗಿಡುವ ಹುನ್ನಾರ ನಡೆದಿದೆ. ದಲಿತರ ಮೇಲೆ ನಡೆದ ಆರ್ಥಿಕ ದೌರ್ಜನ್ಯವಿದು’ ಎಂದು ದೂರಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನೇಕ ಗುತ್ತಿಗೆದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ. ಆಟೋ ಟಿಪ್ಪರ್‌ ಮತ್ತು ಕಾಂಪ್ಯಾಕ್ಟರ್‌ಗಳನ್ನು
ಹೊಂದಿರುವವರೂ ಇದ್ದಾರೆ. ಹೊಸ ಟೆಂಡರಿನಲ್ಲಿ ಗುತ್ತಿಗೆ ಸಿಗದಿದ್ದರೆ ಅಂತಹವರು ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಈಗ ತೆರೆದಿರುವ ಬಿಡ್‌ಗಳನ್ನು ರದ್ದುಪಡಿಸಿ, ಟೆಂಡರ್‌ ಪ್ರಕ್ರಿಯೆಯ ನ್ಯೂನತೆಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಆಗಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ, ಮೇಯರ್‌ ಹಾಗೂ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದೇವೆ. ಒಂದು ವೇಳೆ ಲೋಪ ಸರಿಪಡಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದೇವೆ’ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಚಿರಂಜೀವಿ ಎಚ್ಚರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !