ಮಾತೆ ಮಾಣಿಕೇಶ್ವರಿ ಪ್ರಕರಣ: ಹೈಕೋರ್ಟ್‌ಗೆ ಡಿಸಿ, ಎಸ್ಪಿ

ಸೋಮವಾರ, ಜೂನ್ 24, 2019
30 °C

ಮಾತೆ ಮಾಣಿಕೇಶ್ವರಿ ಪ್ರಕರಣ: ಹೈಕೋರ್ಟ್‌ಗೆ ಡಿಸಿ, ಎಸ್ಪಿ

Published:
Updated:
Prajavani

ಕಲಬುರ್ಗಿ: ‘ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅವರನ್ನು ಟ್ರಸ್ಟ್‌ನವರು ಒತ್ತಾಯ ಪೂರ್ವಕವಾಗಿ ಕೂಡಿಹಾಕಿದ್ದಾರೆ. ಅವರನ್ನು ಬಿಡುಗಡೆ ಮಾಡಿಸಬೇಕು’ ಎಂಬ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಹೈಕೋರ್ಟ್‌ನ ಕಲಬುರ್ಗಿ ವಿಭಾಗೀಯ ಪೀಠದ ಎದುರು ಶುಕ್ರವಾರ ಹಾಜರಾದರು.

ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಹಾಗೂ ಅಶೋಕ ಜಿ.ನಿಜಗಣ್ಣವರ ಅವರಿದ್ದ ವಿಭಾಗೀಯ ಪೀಠವು, ಮಾತೆ ಮಾಣಿಕೇಶ್ವರಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡುವಂತೆ ಎರಡು ವಾರಗಳ ಹಿಂದೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.

ಮೇ 31ರಂದು ಯಾನಾಗುಂದಿಗೆ ಭೇಟಿ ನೀಡಿದ್ದ ಡಿ.ಸಿ., ಎಸ್ಪಿ ಹಾಗೂ ವೈದ್ಯಾಧಿಕಾರಿಗಳ ತಂಡ, ಮಾತೆ ಮಾಣಿಕೇಶ್ವರಿ ಅವರೊಂದಿಗೆ ತೆಲುಗು ಭಾಷಾಂತರಕಾರರ ಸಹಾಯದಿಂದ ಸಂಭಾಷಣೆ→‌ನಡೆಸಿತ್ತು.

ಈ ಸಂದರ್ಭದಲ್ಲಿ ಮಾತೆ ಅವರು, ತಮ್ಮನ್ನು ಯಾರೂ ಕೂಡಿ ಹಾಕಿಲ್ಲ. ತಾವು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ಆದರೆ‌, ವೈದ್ಯಕೀಯ ‌ತಪಾಸಣೆಗೆ ಒಳಪಡಲು ನಿರಾಕರಿಸಿದ್ದರು. ‘ಮಾಣಿಕೇಶ್ವರಿ ಅವರ ಕಾಲಿಗೆ ಪೆಟ್ಟಾಗಿದ್ದು, ಹಾಸಿಗೆ ಹಿಡಿದಿದ್ದಾರೆ. ನಡೆದಾಡಲು ಆಗುತ್ತಿಲ್ಲ. ಹಲವು ವರ್ಷಗಳಿಂದ ಆಹಾರ ಸೇವಿಸದೇ ಇರುವುದರಿಂದ ನಿತ್ರಾಣಗೊಂಡಿದ್ದಾರೆ’ ಎಂದು ಡಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಈ ವಿಷಯವಾಗಿ ವಿವರಣೆ ನೀಡಲು ಡಿಸಿ ಮತ್ತು ಎಸ್ಪಿ ಅವರು ಖುದ್ದು ಹಾಜರಾಗುವಂತೆ ಹೈಕೋರ್ಟ್‌ ಸೂಚಿಸಿತ್ತು. ಇಬ್ಬರೂ ಹಾಜರಾಗಿರುವುದನ್ನು ಖಚಿತಪಡಿಸಿಕೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಜೂನ್ 17ಕ್ಕೆ ‌ಮುಂದೂಡಿತು.

ನಿಡಗುಂದಾ ಶಿವಕುಮಾರ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ‌ಯ ಮೇರೆಗೆ ಪೀಠವು ಹಲವು ದಿನಗಳಿಂದ ವಿಚಾರಣೆ ನಡೆಸುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !