ನಾವು ರಾಜೀನಾಮೆ ನೀಡಲು ಸಿದ್ಧ: ಎನ್.ಎಚ್.ಶಿವಶಂಕರರೆಡ್ಡಿ ಹೇಳಿಕೆ

ಶನಿವಾರ, ಜೂಲೈ 20, 2019
25 °C
ಚಿಕ್ಕಬಳ್ಳಾಪುರದಲ್ಲಿ ಕೃಷಿ ಸಚಿವ

ನಾವು ರಾಜೀನಾಮೆ ನೀಡಲು ಸಿದ್ಧ: ಎನ್.ಎಚ್.ಶಿವಶಂಕರರೆಡ್ಡಿ ಹೇಳಿಕೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್‌ ಹೈಕಮಾಂಡ್ ಈಗಾಗಲೇ ನಮಗೆ ಕಾಲಮಿತಿ ನಿಗದಿ ಮಾಡಿದೆ. ಹೀಗಾಗಿ ನಾವು ರಾಜೀನಾಮೆ ನೀಡಲು ಸಿದ್ಧರಿದ್ದೇವೆ. ಕೆಲ ಸಚಿವರ ರಾಜೀನಾಮೆ ಬಳಿಕ ಅವಕಾಶ ವಂಚಿತರು, ಅಸಮಾಧಾನಗೊಂಡಿರುವವರಿಗೂ ಮಂತ್ರಿ ಭಾಗ್ಯ ದೊರೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

‘ಎರಡು ಪಕ್ಷಗಳ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ತಲೆದೋರುವುದು ಸಹಜ. ಕೆಲವರಿಗೆ ತೊಂದರೆಯಾಗಿರುವುದು ನಿಜ. ಆದರೂ ಎಲ್ಲರ ಒಳಿತಿಗಾಗಿ ಅವುಗಳನ್ನು ನಾವು ಸಹಿಸಿಕೊಂಡು ಮುಂದೆ ಹೋಗಬೇಕು. ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಂಡ ಮಾತ್ರಕ್ಕೆ ಸರ್ಕಾರ ಸುಭದ್ರ ಎಂಬ ಭ್ರಮೆ ಬೇಡ. ಶೀಘ್ರದಲ್ಲಿಯೇ ಮತ್ತೊಂದು ಹಂತದ ಸಂಪುಟ ವಿಸ್ತರಣೆ ನಡೆಯಲಿದೆ’ ಎಂದು ತಿಳಿಸಿದರು.

‘ಬಿ.ಸಿ.ಪಾಟೀಲ್ ಅವರು ಸಚಿವರಾಗಬೇಕಿತ್ತು. ಆ ಭಾಗಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರು ಹತಾಶೆ ಮನೋಭಾವದಿಂದ ಹೇಳಿಕೆ ನೀಡಿರಬಹುದು. ಯಾರಿಗೆ ತೊಂದರೆಯಾಗಿದೆಯೋ ಅವರಿಗೆ ಇನ್ನೊಂದು ಹಂತದಲ್ಲಿ ಸಚಿವ ಸ್ಥಾನದ ಅವಕಾಶ ಸಿಗಲಿದೆ. ಆದ್ದರಿಂದ ಯಾರೂ ಅಸಮಾಧಾನಗೊಳ್ಳದೆ ಸಾವಧಾನವಾಗಿ ಕಾಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !