ಮಮತಾ ಮನವಿ ತಿರಸ್ಕರಿಸಿದ ವೈದ್ಯರು: ಮುಷ್ಕರ ಮುಂದುವರಿಕೆ

ಗುರುವಾರ , ಜೂಲೈ 18, 2019
29 °C

ಮಮತಾ ಮನವಿ ತಿರಸ್ಕರಿಸಿದ ವೈದ್ಯರು: ಮುಷ್ಕರ ಮುಂದುವರಿಕೆ

Published:
Updated:

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯು ಆರನೇ ದಿನವಾದ ಭಾನುವಾರವೂ ಮುಂದುವರಿದಿದೆ. 

ವೈದ್ಯರ ಕುರಿತ ತಮ್ಮ ನಿಲುವನ್ನು ಶನಿವಾರ ಬದಲಿಸಿಕೊಂಡಿದ್ದ ಮಮತಾ ಬ್ಯಾನರ್ಜಿ, ‘ವೈದ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅವರ ವಿರುದ್ಧ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸುವುದಿಲ್ಲ. ಎಲ್ಲರೂ ಸೇವೆಗೆ ಮರಳಬೇಕು. ವೈದ್ಯರು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ. ಆದರೂ ಸರ್ಕಾರ ಒತ್ತಾಯಪೂರ್ವಕವಾಗಿ ಅದನ್ನು ಸಾಧಿಸುವುದಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ: ಬೀದಿಗಿಳಿದರೇಕೆ ವೈದ್ಯರು | ಕೊಲ್ಕತ್ತಾದಲ್ಲಿ ಅಂದು ಏನಾಯ್ತು? ಮುಂದೇನಾಗುತ್ತೆ?

ಆದರೆ, ಮಮತಾ ಅವರ ಮನವಿಯನ್ನು ಕಿರಿಯ ವೈದ್ಯರು ತಿರಸ್ಕರಿಸಿದರು. ಪ್ರಸ್ತುತ ವೈದ್ಯರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರ ಮನವಿಯು ಪ್ರಾಮಾಣಿಕವಾಗಿದ್ದಂತೆ ಕಾಣುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಮುಷ್ಕರ ಮುಂದುವರಿದಿದೆ. 

ಈ ಮಧ್ಯೆ ವೈದ್ಯರ ಮುಷ್ಕರದ ಕುರಿತು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಿಂದ ವರದಿ ಕೇಳಿದೆ ಎಂದು ಹೇಳಲಾಗಿದೆ. ಇದಲ್ಲದೇ, ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದು, ವೈದ್ಯರ ಮೇಲೆ ಹಲ್ಲೆ ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಮೃತ ರೋಗಿಯೊಬ್ಬರ ಸಂಬಂಧಿಕರು ಇತ್ತೀಚೆಗೆ ಇಬ್ಬರು ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ವೈದ್ಯರನ್ನು ದೊಡ್ಡ ಮಟ್ಟದ ಚಳವಳಿಗೆ ದೂಡಿದೆ. ಚಳವಳಿ ದೇಶವನ್ನೇ ಆವರಿಸಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !