ಬುಧವಾರ, 18–6–1969

ಭಾನುವಾರ, ಜೂಲೈ 21, 2019
28 °C

ಬುಧವಾರ, 18–6–1969

Published:
Updated:

ದುಬಾರಿ ಅಣುವಿದ್ಯುತ್

ನವದೆಹಲಿ, ಜೂನ್ 17– ಈ ಮುಂಚಿನ ಲೆಕ್ಕಾಚಾರಕ್ಕೆ ತದ್ವಿರುದ್ಧವಾಗಿ ಅಣುಶಕ್ತಿಯಿಂದ ವಿದ್ಯುದುತ್ಪಾದನೆ ಈಗ ತುಂಬಾ ದುಬಾರಿಯಾಗಿದೆ. ಆದ್ದರಿಂದ, ವಿದ್ಯುದುತ್ಪಾದನೆ ಕಾರ್ಯಕ್ರಮದ ಬಗ್ಗೆ ಸರ್ಕಾರ ದೂರದೃಷ್ಟಿಯಿಂದ ಗಹನವಾಗಿ ಆಲೋಚಿಸುವ ಕಾಲ ಪ‍್ರಾಪ್ತವಾಗಿದೆ.

ಇತ್ತೀಚೆಗೆ ಕಾರ್ಯಾರಂಭ ಮಾಡಿದ ತಾರಾಪುರ ಅಣು ವಿದ್ಯುದುತ್ಪಾದನಾ ಕೇಂದ್ರ ಕಿಲೋವಾಟ್‌ಗೆ ಎಂಟು ಪೈಸೆಯಂತೆ ವಿದ್ಯುತ್ತನ್ನು ಉತ್ಪಾದಿಸುತ್ತಿದೆ.

ಕಿಲೋವಾಟ್‌ಗೆ ಮೂರರಿಂದ ನಾಲ್ಕು ಪೈಸೆ ವೆಚ್ಚದಲ್ಲಿ ಇಲ್ಲಿ ವಿದ್ಯುತ್ ಉತ್ಪಾದಿಸಬಹುದೆಂದು ಈ ಮುಂಚೆ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಈಗ ಯಂತ್ರೋಪಕರಣಗಳಿಗಾಗಿ ವಿನಿಯೋಗಿಸಿರುವ ಹಣ ಅಂದಾಜಿಗಿಂತ ಶೇಕಡ ಐವತ್ತರಷ್ಟು ಹೆಚ್ಚಾಗಿರುವುದೇ ಅಣು ವಿದ್ಯು
ದುತ್ಪಾದನೆ ವೆಚ್ಚ ಅಧಿಕಗೊಳ್ಳಲು ಕಾರಣ. ಇದು, ಕೆಲವು ರಾಜ್ಯಗಳ ಬೇಡಿಕೆಯಂತೆ ಅಣುಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಹೊಸ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪುನರಾಲೋಚನೆಗೆ ಕಾರಣವಾಗಿದೆ. 

ರಾಷ್ಟ್ರಪತಿ: ‘ಎಂಥವರು ಎನ್ನುವುದು ಮುಖ್ಯ’

ಬೆಂಗಳೂರು, ಜೂನ್ 17– ಶ್ರೀ ಕೆಂಗಲ್ ಹನುಮಂತಯ್ಯನವರ ದೃಷ್ಟಿಯಲ್ಲಿ ‘ರಾಷ್ಟ್ರಪತಿ ಯಾರು ಆಗಬೇಕು ಅನ್ನುವುದಕ್ಕಿಂತ ಎಂಥವರು ರಾಷ್ಟ್ರಪತಿಯಾಗಬೇಕು ಅನ್ನುವುದು ಮುಖ್ಯ’.

‘ನಿಮ್ಮ ಅಭಿಪ್ರಾಯದಲ್ಲಿ ರಾಷ್ಟ್ರಪತಿ ಯಾರು ಆಗಬಹುದು?’ ಎಂದು ವರದಿಗಾರರು ಪ್ರಶ್ನಿಸಿದಾಗ ಶ್ರೀ ಹನುಮಂತಯ್ಯನವರು ‘ಎಂಥವರು ಆಗಬೇಕು ಎಂದು ಕೇಳಿ’ ಎಂದರು.

‘ಎಂಥವರು ಆಗಬೇಕು?’ ಎಂಬ ಪ್ರಶ್ನೆಯನ್ನು ಕಡೆಗಣಿಸಲಾಗುತ್ತಿದೆಯೆಂದೂ ವ್ಯಕ್ತಿ ದೃಷ್ಟಿಯಿಂದ ಚರ್ಚಿಸಲಾಗುತ್ತಿದೆ
ಯೆಂದೂ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !