ಶನಿವಾರ, 18–6–1994

ಭಾನುವಾರ, ಜೂಲೈ 21, 2019
25 °C

ಶನಿವಾರ, 18–6–1994

Published:
Updated:

ಮೇಲ್ಮನೆ ಚುನಾವಣೆ: ಬಿಜೆಪಿಗೆ ಪ್ರಚಂಡ ಜಯ

ಬೆಂಗಳೂರು, ಜೂನ್ 17– ರಾಜ್ಯದ ಹದಿನಾರು ಜಿಲ್ಲೆಗಳ ಸುಶಿಕ್ಷಿತ ಮತದಾರರನ್ನು ಒಳಗೊಂಡ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದು ಭಾರತೀಯ ಜನತಾ ಪಕ್ಷ ದಿಗ್ವಿಜಯ ಬಾರಿಸಿದ್ದರೆ, ಅಧಿಕೃತ ವಿರೋಧ ಪಕ್ಷವಾದ ಜನತಾದಳ ಒಂದು ಸ್ಥಾನ ಗಳಿಸಿ ಮುಖ ಉಳಿಸಿಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ.

ಪದವೀಧರರ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದ ಬಿಜೆಪಿಯ ರಾಮಚಂದ್ರ ಗೌಡ, ಡಾ. ಎಂ.ಆರ್‌.ತಂಗಾ ಮತ್ತು ಡಿ.ಎಚ್‌.ಶಂಕರಮೂರ್ತಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಶಿಕ್ಷಕರ ಕ್ಷೇತ್ರಗಳಿಂದ ಬಿಜೆಪಿ ಬೆಂಬಲಿತ ಕೆ.ಬಾಲಕೃಷ್ಣ ಭಟ್, ದಳದ ಕೆ.ಎಸ್. ಸಚ್ಚಿದಾನಂದ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೆ.ಸಿ. ಪುಟ್ಟಸಿದ್ಧಶೆಟ್ಟಿ ಗೆಲುವು ಸಾಧಿಸಿದ್ದಾರೆ.

ವಿಶ್ವಕಪ್ ಫುಟ್ಬಾಲ್– ವೈಭವದ ಆರಂಭ

‌ಷಿಕಾಗೋ, ಜೂನ್ 17– ಷಿಕಾಗೋ ನಗರದ ಸೋಲ್ಜರ್‌ ಫೀಲ್ಡ್ ಕ್ರೀಡಾಂಗಣದಲ್ಲಿ ವೈಭವೋಪೇತ ಸಮಾರಂಭದೊಂದಿಗೆ 1994ರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಇಂದು ಆರಂಭವಾಯಿತು.

ಆಕರ್ಷಕ ಉದ್ಘಾಟನಾ ಸಮಾರಂಭದ ಬಳಿಕ ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫೀಫಾ) ಅಧ್ಯಕ್ಷ ಜೋವಾ ಹ್ಯಾವೆಲಾಂಗಿ ಅವರು ವಿಶ್ವಕಪ್ ಆರಂಭವನ್ನು ಘೋಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !