ನಿಲ್ದಾಣ ನವೀಕರಣ–ರೈಲು ಸಂಚಾರ ವ್ಯತ್ಯಯ

ಗುರುವಾರ , ಜೂಲೈ 18, 2019
29 °C
ಮೈಸೂರು–ಪಾಂಡವಪುರ ನಡುವೆ ಹೆಚ್ಚುವರಿ ಬಸ್ಸಿನ ಸೌಲಭ್ಯ

ನಿಲ್ದಾಣ ನವೀಕರಣ–ರೈಲು ಸಂಚಾರ ವ್ಯತ್ಯಯ

Published:
Updated:
Prajavani

ಮೈಸೂರು: ಮೈಸೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ನವೀಕರಣದ ಕೆಲಸ ನಡೆಯುತ್ತಿರುವುದರಿಂದ ಕೆಲ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.

ನವೀಕರಣ ಕೆಲಸವು ಹಗಲಲ್ಲಿ ಭಾರೀ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಾಡುವಂಥದ್ದಾಗಿದೆ. ದೂರ ಪ್ರಯಾಣದ ರೈಲುಗಳಿಗೆ ಹೆಚ್ಚು ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕಾಮಗಾರಿಯನ್ನು ಮಧ್ಯರಾತ್ರಿಯಿಂದ ಬೆಳಿಗ್ಗೆ 7 ಗಂಟೆವರೆಗೆ ನಡೆಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‌ 19ರ ಮೈಸೂರು- ಚೆನ್ನೈ ಸೂಪರ್‌ ಫಾಸ್ಟ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ (ಸಂಖ್ಯೆ 22681) ಹಾಗೂ ಜೂನ್‌ 20ರ ಚೆನ್ನೈ-ಮೈಸೂರು ಸೂಪರ್‌ ಫಾಸ್ಟ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಸಂಖ್ಯೆ 22682) ಸಂಪೂರ್ಣವಾಗಿ ರದ್ದುಗೊಂಡಿವೆ.

ಜೂನ್‌ 17ರಿಂದ 22ರವರೆಗೆ ಹುಬ್ಬಳ್ಳಿ- ಮೈಸೂರು ಹಂಪಿ ಎಕ್ಸ್‌ಪ್ರೆಸ್ (ಸಂಖ್ಯೆ 16591) ಪ್ರಯಾಣವು ಪಾಂಡವಪುರದಿಂದ ಮೈಸೂರಿನವರೆಗೆ ಹಾಗೂ ಜೂನ್‌ 18ರಿಂದ 23ರ ರವರೆಗೆ ಮೈಸೂರು -ಸೋಲಾಪುರ್ ಗೋಲಗುಂಬಜ್‌ ದೈನಿಕ ಎಕ್ಸ್‌ಪ್ರೆಸ್‌ (ಸಂಖ್ಯೆ 16535) ಪ್ರಯಾಣವು ಮೈಸೂರಿನಿಂದ ಪಾಂಡವಪುರದ ನಡುವೆ ಭಾಗಶಃ ರದ್ದಾಗಿದೆ.

ಬಸ್ಸಿನ ವ್ಯವಸ್ಥೆ: ಈ ಅವಧಿಯಲ್ಲಿ ರೈಲಿನ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವತಿಯಿಂದ ಮೈಸೂರು–ಪಾಂಡವಪುರ, ಪಾಂಡಪುರ–ಮೈಸೂರು ನಡುವೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಜೂನ್ 18ರಿಂದ 23ರವರೆಗೆ ಮೈಸೂರು–ಸೋಲಾಪುರ ಗೋಲ ಗುಂಬಜ್‌ ದೈನಿಕ ಎಕ್ಸ್‌ಪ್ರೆಸ್‌ನಲ್ಲಿ (ಸಂಖ್ಯೆ 16535) ಸೀಟು ಕಾಯ್ದಿರಿಸಿದ ಪ್ರಯಾಣಿಕರು ಬಸ್ಸಿನಲ್ಲಿ ಪಾಂಡವಪುರಕ್ಕೆ ತೆರಳಲು ಮಧ್ಯಾಹ್ನ 1.30ಕ್ಕೆ ಮೈಸೂರು ರೈಲು ನಿಲ್ದಾಣದಲ್ಲಿರಬೇಕು ಎಂದು ಪ್ರಕಟಣೆ ಕೋರಿದೆ.

ಮಾಹಿತಿಗೆ ಮೊ: 9731667979/ 9731667962/ 9731667964/ 0821-2422401 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !