ಶನಿವಾರ, 9–7–1994

ಬುಧವಾರ, ಜೂಲೈ 24, 2019
27 °C

ಶನಿವಾರ, 9–7–1994

Published:
Updated:

ಆಹಾರ ಧಾನ್ಯ ಸಬ್ಸಿಡಿ ರದ್ದು ಇಲ್ಲ

ಬೆಂಗಳೂರು, ಜುಲೈ 8– ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸುವ ಅಥವಾ ಸಬ್ಸಿಡಿ ದರವನ್ನು ಇಳಿಸುವ ಕ್ರಮ ಕೈಗೊಳ್ಳುವುದಿಲ್ಲ. ಕೆಲವೇ ತಿಂಗಳಲ್ಲೇ ಸಕ್ಕರೆ ಬೆಲೆಯನ್ನು ಗ್ರಾಹಕರಿಗೆ ಸಮಾಧಾನ ಆಗುವ ರೀತಿಯಲ್ಲಿ ಇಳಿಸಲಾಗುವುದು. ದೇಶದಾದ್ಯಂತ ಸಕ್ಕರೆ ಪೂರೈಕೆಗೆ ಯಾವ ಅಡೆತಡೆಗಳಿರುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಎ.ಕೆ. ಆಂಟನಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಸಾಂಡ್ರಾ, ಹಿಂಡಸಗೇರಿ, ಮೋರೆಗೆ ನೋಟಿಸ್: 9 ಶಾಸಕರ ಉಚ್ಚಾಟನೆಗೆ ಶಿಫಾರಸು

ಬೆಂಗಳೂರು, ಜುಲೈ 8– ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪವಿರುವ ಸಚಿವರಾದ ಗೋಪಿನಾಥ ಸಾಂಡ್ರಾ, ಎ.ಎಂ. ಹಿಂಡಸಗೇರಿ,ಮಾಜಿ ಸಚಿವ ಎಸ್.ಆರ್. ಮೋರೆ ಅವರಿಗೆ ವಿವರಣೆ ಕೋರಿ ನೋಟಿಸ್ ಜಾರಿಗೆ ಪ್ರದೇಶ ಕಾಂಗ್ರೆಸ್ (ಐ)ಸಮಿತಿಯ ಶಿಸ್ತು ಕ್ರಮ ಸಮಿತಿ ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !