ಗುರುವಾರ , ನವೆಂಬರ್ 14, 2019
19 °C

ನಾಗರಾಜು, ಸುರೇಶ್‌ಗೆ ಶಂಕರಗೌಡ ಸ್ಮಾರಕ ಪ್ರಶಸ್ತಿ

Published:
Updated:
Prajavani

ಮಂಡ್ಯ: ಕೆ.ವಿ.ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಕೊಡಮಾಡುವ ರಾಜ್ಯಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ಸ್ಮಾರಕ ಸಮಾಜಸೇವಾ ಪ್ರಶಸ್ತಿಗೆ ಪರಿಸರ ಪ್ರೇಮಿ ಸಿ.ನಾಗರಾಜು (ಸಾಲುಮರದ ನಾಗರಾಜು), ರಂಗಭೂಮಿ ಪ್ರಶಸ್ತಿಗೆ ಕಲಾವಿದ ಕಾರಸವಾಡಿ ಸುರೇಶ್‌ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ರಾಮಲಿಂಗಯ್ಯ ‘ಪ್ರಶಸ್ತಿಯು ₹ 15 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜುಲೈ 15ರಂದು ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಡಿಐಜಿ ಡಾ.ಬಿ.ಆರ್.ರವಿಕಾಂತೇಗೌಡ ಪ್ರಶಸ್ತಿ ಪ್ರದಾನ ಮಾಡುವರು’ ಎಂದರು.

‘ಜನತಾ ಶಿಕ್ಷಣ ಸಂಸ್ಥೆ (ಪಿಇಟಿ) ಅಧ್ಯಕ್ಷ ಡಾ.ಎಚ್‌.ಡಿ. ಚೌಡಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ‘ಸುಶೀಲಮ್ಮ ಶಂಕರಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಸಿಇಒ ಕೆ.ಯಾಲಕ್ಕೀಗೌಡ, ಆರ್‌ಪಿಸಿಎಂಎಸ್‌ ಎಸ್.ಎನ್.ಶಂಕರ್, ನಿರ್ದೇಶಕ ಎನ್.ವೆಂಕಟೇಶ್ ಸಮಾರಂಭದಲ್ಲಿ ಭಾಗವಹಿಸುವರು’ ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಜಿ.ಟಿ.ವೀರಪ್ಪ, ಟ್ರಸ್ಟಿಗಳಾದ ಡಾ.ಟಿ.ಎಂ.ಪ್ರಕಾಶ್, ಪ್ರೊ.ಕೆ.ಆರ್.ಶಿವಾನಂದ, ಪ್ರೊ.ಎಚ್.ಎಸ್.ನರಸಿಂಹಮೂರ್ತಿ, ಡಾ.ಜಿ.ಪಿ.ಶಿವಶಂಕರ್ ಇದ್ದರು.

ಪ್ರತಿಕ್ರಿಯಿಸಿ (+)