ಭಾನುವಾರ, ಆಗಸ್ಟ್ 18, 2019
22 °C

ಜೆರ್ಸಿ ನಂಬರ್ ಹಾಸ್ಯಾಸ್ಪದ: ಬ್ರೆಟ್ ಲೀ

Published:
Updated:
Prajavani

ಮೆಲ್ಬರ್ನ್: ಆ್ಯಷಸ್ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿರುವ ಆಟಗಾರರ ಪೋಷಾಕಿನ (ಜೆರ್ಸಿ) ಮೇಲೆ ಮುದ್ರಿಸಿರುವ ಸಂಖ್ಯೆ ಮತ್ತು ಹೆಸರುಗಳು ಹಾಸ್ಯಾಸ್ಪದವಾಗಿವೆ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಬ್ರೆಟ್ ಲೀ ಟೀಕಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಳಿ ಪೋಷಾಕುಗಳ ಮೇಲೆ ಸಂಖ್ಯೆಯನ್ನು ಮುದ್ರಿಸಲಾಗಿದೆ. ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಈ ಪದ್ಧತಿ ಇತ್ತು. ಆದರೆ ಇದೀಗ ಟೆಸ್ಟ್‌ನಲ್ಲಿ ಆರಂಭಿಸಲಾಗಿದೆ. ಜೆರ್ಸಿಯ ಬೆನ್ನ ಮೇಲೆ ದೊಡ್ಡದಾಗಿ ಸಂಖ್ಯೆಗಳನ್ನು ಮುದ್ರಿಸಲಾಗಿದೆ.

‘ಈ ಹೊಸ ನಡೆಯುವ ತೀರಾ ಅಸಹ್ಯವಾಗಿದೆ. ಟೆಸ್ಟ್ ಕ್ರಿಕೆಟ್‌ ಪೋಷಾಕಿನ ಮೇಲೆ ಆಟಗಾರರ ಸಂಖ್ಯೆಗಳನ್ನು ಹಾಕುವುದಕ್ಕೆ ನನ್ನ ವಿರೋಧವಿದೆ. ಇದು ಅಪಹಾಸ್ಯವಾಗಿ ಕಾಣುತ್ತಿದೆ. ಕ್ರಿಕೆಟ್‌ನಲ್ಲಿ ಒಳ್ಳೆಯ ಸುಧಾರಣೆಗಳನ್ನು ನಾನು ಸ್ವಾಗತಿಸುತ್ತೇನೆ.  ಆದರೆ ಇದಲ್ಲ’ ಎಂದು ಲೀ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಇನ್ನೊಬ್ಬ ಹಿರಿಯ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ ಕೂಡ ಬ್ರೆಟ್‌ ಲೀ ಜೊತೆಗೆ ದನಿಗೂಡಿಸಿದ್ದಾರೆ.

 

 

 

Post Comments (+)