ಶುಕ್ರವಾರ, ಆಗಸ್ಟ್ 23, 2019
21 °C

ಮಹಿಳಾ ಟ್ವೆಂಟಿ–20 ಲೀಗ್: ವೇದಾ ಅರ್ಧಶತಕ, ಟೀಂ ಕಾವೇರಿ ಶುಭಾರಂಭ

Published:
Updated:
Prajavani

ಬೆಂಗಳೂರು: ಅಂತರರಾಷ್ಟ್ರೀಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ  ಅವರ ಅಮೋಘ ಅರ್ಧಶತಕದ ಬಲದಿಂದ ಟೀಮ್ ಕಾವೇರಿ ತಂಡವು ಭಾನುವಾರ ಆರಂಭವಾದ ಒಷಿಯನ್ ವೈಬ್ರೆನ್ಸ್‌ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಲೀಗ್ (ಡಬ್ಲ್ಯುಸಿಎಲ್) ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಕಾವೇರಿ ತಂಡವು 8 ವಿಕೆಟ್‌ಗಳಿಂದ ಸಿಂಧು ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಂಧು ತಂಡವು ಕರುಣಾ ಜೈನ್ (23 ರನ್) ಮತ್ತು ಆದಿಶ್ರೀ ಚೆಂಗಪ್ಪ (22 ರನ್) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 108 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಕಾವೇರಿ ತಂಡವು ವೇದಾ (69 ರನ್) ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಸುಲಭ ಜಯ ಸಾಧಿಸಿತು. 16.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 109 ರನ್‌ ಗಳಿಸಿತು.

ಇನ್ನೊಂದು ಪಂದ್ಯದಲ್ಲಿ ಟೀಮ ಯಮುನಾ 22 ರನ್‌ ಗಳಿಂದ ನರ್ಮದಾ ತಂಡದ ಎದುರು ಜಯಿಸಿತು. ಡಿ. ವೃಂದಾ (40 ರನ್) ಮತ್ತು ರೋಷನಿ ಕಿರಣ್ (35 ರನ್) ಅವರ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 109 ರನ್‌ ಗಳಿಸಿತು. ಗುರಿ ಬೆನ್ನತ್ತಿದ ನರ್ಮದಾ ತಂಡವು 18.2 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು:

ಟೀಮ್ ಸಿಂಧು: 20 ಓವರ್‌ಗಳಲ್ಲಿ 108 (ಕರುಣಾ ಜೈನ್ 23, ಆದಿಶ್ರೀ ಚೆಂಗಪ್ಪ 22, ಸಿಮ್ರನ್ ಹೆನ್ರಿ 12ಕ್ಕೆ3, ನಗ್ಮಾ 10ಕ್ಕೆ2, ಆರ್. ಅದಿತಿ 27ಕ್ಕೆ2), ಟೀಮ್ ಕಾವೇರಿ: 16.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 109 (ವೇದಾ ಕೃಷ್ಣಮೂರ್ತಿ 69, ಸಿಮ್ರನ್ ಹೆನ್ರಿ 34, ಜಿ. ದೀವಾ 20ಕ್ಕೆ1) ಫಲಿತಾಂಶ: ಟೀಮ್ ಕಾವೇರಿಗೆ 8 ವಿಕೆಟ್‌ಗಳ ಜಯ.

ಟೀಮ್ ಯಮುನಾ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 109 (ಡಿ. ವೃಂದಾ 40, ರೋಷನಿ ಕಿರಣ್ 35, ಆಕಾಂಕ್ಷಾ ಕೊಹ್ಲಿ 20ಕ್ಕೆ3) ಟೀಮ್ ನರ್ಮದಾ: 18.2 ಓವರ್‌ಗಳಲ್ಲಿ 87 (ಆಕಾಂಕ್ಷಾ ಕೊಹ್ಲಿ 19, ಎಂ. ಸೌಮ್ಯಾ 3ಕ್ಕೆ2) ಫಲಿತಾಂಶ: ಟೀಮ್‌ ಯಮುನಾಗೆ 22 ರನ್‌ಗಳ ಜಯ.

 

Post Comments (+)