ಬುಧವಾರ, ಆಗಸ್ಟ್ 21, 2019
28 °C

ಎನ್‌ಎಲ್‌ಎಸ್‌ಐಯು ನೂತನ ಕುಲಪತಿ ಸುಧೀರ ಕೃಷ್ಣಸ್ವಾಮಿ

Published:
Updated:
Prajavani

ಬೆಂಗಳೂರು: ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ನೂತನ ಕುಲಪತಿಯನ್ನಾಗಿ ಪ್ರೊ. ಸುಧೀರ ಕೃಷ್ಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ನೇತೃತ್ವದ ಕಾರ್ಯಕಾರಿ ಮಂಡಳಿಯು ಈ ತೀರ್ಮಾನ ಕೈಗೊಂಡಿದೆ. ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಇತ್ತೀಚೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು.

ಸುಧೀರ ಕೃಷ್ಣಸ್ವಾಮಿ, ಪ್ರೊ. ಶಶಿಕಲಾ ಗುರ್ಪುರ್ ಹಾಗೂ ಪ್ರೊ. ಶ್ರೀಕೃಷ್ಣ ದೇವರಾವ್ ಅವರ ಹೆಸರುಗಳನ್ನು ಸಮಿತಿಯು ಹುದ್ದೆಗೆ ಶಿಫಾರಸು ಮಾಡಿತ್ತು. ಅಂತಿಮವಾಗಿ ಸುಧೀರ್ ಅವರನ್ನು ನೇಮಕ ಮಾಡಲಾಗಿದೆ. 

Post Comments (+)