ಶನಿವಾರ, ಆಗಸ್ಟ್ 24, 2019
23 °C
ಟ್ರಂಪ್‌ ಪ್ರತಿಪಾದನೆ; ಏಕರೂಪದ ನಿಲುವಿಗೆ ಉಭಯ ಪಕ್ಷಗಳಿಗೆ ಸಲಹೆ

ಶಸ್ತ್ರಾಸ್ತ್ರ ನಿರ್ಬಂಧ ನಿಯಮಗಳಿಗೆ ಇನ್ನಷ್ಟು ಬಲ

Published:
Updated:
Prajavani

ವಾಷಿಂಗ್ಟನ್‌ (ಎಎಫ್‌ಪಿ): ‘ಶಸ್ತ್ರಾಸ್ತ್ರ ನಿರ್ಬಂಧ ನಿಯಮಗಳನ್ನು ಇನ್ನಷ್ಟು ಬಲಪಡಿಸಲು ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷಗಳು ಸಮ್ಮತಿಸಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಲಹೆ ಮಾಡಿದ್ದಾರೆ.

‘ಅಲ್ಲದೆ, ಈ ಕುರಿತು ರಚಿಸಲಿರುವ ನೂತನ ಕಾಯ್ದೆಯನ್ನು ತಾವು ರೂಪಿಸಿರುವ ವಲಸಿಗರ ಸುಧಾರಣೆ ಕುರಿತ ಯೋಜನೆಯ ಜೊತೆಗೂ ಸಮೀಕರಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷಗಳು ಒಟ್ಟಾಗಿ ಇದರ ಹಿನ್ನೆಲೆಯನ್ನು ಪರಿಶೀಲಿಸಬೇಕು. ವಲಸಿಗರ ಸಮಸ್ಯೆ ಸುಧಾರಣೆಗೆ ಇದು ಅಗತ್ಯವೂ ಆಗಿದೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಟೆಕ್ಸಾಸ್‌, ಒಹಿಯೊದಲ್ಲಿ ನಡೆದ ಕ್ರಮವಾಗಿ 29 ಜನರು ಸತ್ತು, 12ಕ್ಕೂ ಅಧಿಕ ಜನ ಗಾಯಗೊಂಡ ಶೂಟಿಂಗ್‌ ಪ್ರಕರಣ
ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಿದ್ಧತೆ ನಡೆಸಿರುವಂತೆಯೇ ಟ್ವೀಟ್‌ ಮಾಡಿದ್ದಾರೆ.

‘ಈ ಎರಡೂ ಶೂಟಿಂಗ್‌ ಘಟನೆಗಳ ಹಿನ್ನೆಲೆಯಲ್ಲಿ ನಾವು ಮಹತ್ತರವಾದುದು ಅಲ್ಲವಾದರೂ, ಖಂಡಿತವಾಗಿ ಒಳ್ಳೆಯ
ದನ್ನು ಪಡೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗನ್‌ ಸಂಸ್ಕೃತಿ ಅಮೆರಿಕದಲ್ಲಿ ಬೇರೂರಿದೆ. ಸಾಮೂಹಿಕ ಹತ್ಯೆ ಪ್ರಕರಣಗಳು ನಡೆದಿದ್ದರೂ ಶಸ್ತ್ರಾಸ್ತ್ರ ನಿಯಂತ್ರಣ ನಿಯಮಗಳನ್ನು ಬಲಪಡಿಸುವುದು ನನೆಗುದಿಯಲ್ಲಿದೆ. ಕಳೆದ ವಾರಾಂತ್ಯ ನಡೆದ ಎರಡು ಸಮೂಹ ಶೂಟಿಂಗ್‌  ಪ್ರಕರಣಗಳು ಈ ವರ್ಷ ನಡೆದ 250 ಮತ್ತು 251ನೇ ಪ್ರಕರಣಗಳು ಎಂದು ಎನ್‌ಜಿಒ ಗನ್‌ ವಯಲೆನ್ಸ್‌ ಆರ್ಕೈವ್‌ನ ಅಂಕಿ ಅಂಶಗಳು ಹೇಳಿವೆ. ‘ತಮ್ಮ ವಲಸೆ ವಿರೋಧಿ ನೀತಿಯೂ ಹಿಂಸೆಗೆ ಕಾರಣ ಎಂಬ ವಿಮರ್ಶೆಯೂ ವ್ಯಕ್ತವಾಗಿದೆ ಎಂದು ಹೇಳಿದರು. ಕೋಪ ಮತ್ತು ಅಸಮಾಧಾನ ಹಲವು ವರ್ಷಗಳಿಂದ ಹೆಪ್ಪುಗಟ್ಟಲು ಸುಳ್ಳು ಸುದ್ದಿಗಳು ಕಾರಣ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

Post Comments (+)