ಭಾನುವಾರ, ಆಗಸ್ಟ್ 25, 2019
20 °C

ತುರ್ತು ನಿರ್ವಹಣಾ ನಿಧಿಯಿಂದ ರೈತರಿಗೆ ತಲಾ ₹2 ಸಾವಿರ

Published:
Updated:

ಬೆಂಗಳೂರು: ರಾಜ್ಯದ ತುರ್ತು ಕಾರ್ಯಕ್ರಮಗಳ ನಿರ್ವಹಣಾ ನಿಧಿಯ (contingency fund) ಮೊತ್ತವನ್ನು ₹ 80 ಕೋಟಿ ರೂ.ನಿಂದ ₹ 2,200 ಕೋಟಿ ರೂ.ಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಈ ನಿಧಿಯಿಂದ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ’ಯಡಿ ರೈತರಿಗೆ ಮೊದಲ ಕಂತಿನ ₹2,000 ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.  ಸುಗ್ರಿವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

Post Comments (+)