ಶನಿವಾರ, ಆಗಸ್ಟ್ 24, 2019
21 °C

ವಿಜಿ ಟ್ರೋಫಿ: ಅರ್ಜುನ್ ತೆಂಡೂಲ್ಕರ್ ಆಯ್ಕೆ

Published:
Updated:
Prajavani

ಮುಂಬೈ (ಪಿಟಿಐ):  ಇದೇ ತಿಂಗಳು ಆರಂಭವಾಗಲಿರುವ ವಿಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಎಡಗೈ ಮಧ್ಯಮವೇಗದ ಬೌಲರ್ ಆಗಿದ್ದಾರೆ.  ಮಂಗಳವಾರ ಮುಂಬೈ ಕ್ರಿಕೆಟ್ ಸಂಸ್ಥೆಯು 15 ಆಟಗಾರರ ತಂಡವನ್ನು ಪ್ರಕಟಿಸಿದೆ.  

ತಂಡ ಇಂತಿದೆ: ಹಾರ್ದಿಕ್ ತಮೊರೆ (ನಾಯಕ), ಸೃಜನ್ ಅಠಾವಳೆ, ರುದ್ರ ದಾಂಡೆ, ಚಿನ್ಮಯ್ ಸುತಾರ, ಆಶಯ್ ಸರ್ದೇಸಾಯಿ, ಸಾಯಿರಾಜ್ ಪಾಟೀಲ, ಓಂಕಾರ್ ಜಾಧವ್, ಸತ್ಯಲಕ್ಷ ಜೈನ್, ಮಿನಾದ್ ಮಾಂಜ್ರೇಕರ್, ಅರ್ಜುನ್ ತೆಂಡೂಲ್ಕರ್, ಅಮನ್ ಶೆರಾನ್, ಅಥರ್ವ ಪೂಜಾರಿ, ಮ್ಯಾಕ್ಸ್‌ವೆಲ್ ಸ್ವಾಮಿನಾಥನ್, ಪ್ರಶಾಂತ್ ಸೋಳಂಕಿ, ವಿಘ್ನೇಶ್ ಸೋಳಂಕಿ

Post Comments (+)