ಭಾನುವಾರ, ಆಗಸ್ಟ್ 25, 2019
20 °C

ಕನ್ನಡ ಹಾಡು ಹಾಡಲಿಲ್ಲವೆಂದು ಹಲ್ಲೆ!

Published:
Updated:

ಬೆಂಗಳೂರು: ಸಂಗೀತ ಕಾರ್ಯಕ್ರಮದ ವೇಳೆ ಕನ್ನಡ ಹಾಡು ಹಾಡಲಿಲ್ಲವೆಂದು ಕುಡಿದ ಅಮಲಿನಲ್ಲಿದ್ದ ನಾಲ್ವರು ಸಂಗೀತಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ಮಹದೇವಪುರ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ ಬಳಿ ನಡೆದಿದೆ.

ಘಟನೆಯಿಂದ ಗಿಟಾರ್‌ ವಾದಕ ಅನುಭವ್ ಎಂಬುವರ ಕಣ್ಣಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲ್‌ನಲ್ಲಿ ಮ್ಯೂಸಿಕ್‌ ಬ್ಯಾಂಡ್‌ ನಡೆಯುತ್ತಿತ್ತು. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಅಲ್ಲಿಗೆ ಬಂದ ನಾಲ್ವರು ಯುವಕರು, ಕನ್ನಡ ಹಾಡುಗಳನ್ನು ಹಾಡುವಂತೆ ಸಂಗೀತಗಾರರನ್ನು ಒತ್ತಾಯಿಸಿದ್ದಾರೆ.

ಸಂಗೀತ ಉಪಕರಣಕ್ಕೆ ಅಳವಡಿಸಿದ್ದ ವಿದ್ಯುತ್‌ ಸಂಪರ್ಕ ತೆಗೆದು ಹಾಕಿದ ಸಂಗೀತಗಾರರು, ‘ಕಾರ್ಯಕ್ರಮ ಮುಗಿಯಿತು’ ಎಂದು ತಿಳಿಸಿದಾಗ ಆಕ್ರೋಶಗೊಂಡ ಯುವಕರು ಹಲ್ಲೆ ನಡೆಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ. ಮಹದೇಪಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)