ಶನಿವಾರ, ಆಗಸ್ಟ್ 24, 2019
27 °C

ಕಾರವಾರ ಎಕ್ಸ್‌ಪ್ರೆಸ್ ಸಂಚಾರ ರದ್ದು

Published:
Updated:

ಬೆಂಗಳೂರು: ಭಾರಿ ಮಳೆಯ ಕಾರಣದಿಂದ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಬೆಳಿಗ್ಗೆ 7.10ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಮಂಗಳೂರು ಮಾರ್ಗವಾಗಿ ರಾತ್ರಿ 11.25ಕ್ಕೆ ಕಾರವಾರ ತಲುಪಬೇಕಿದ್ದ ರೈಲು ಸಂಚಾರವನ್ನು ಬುಧವಾರದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಮಂಗಳವಾರ ಸಂಜೆ 4.30ಕ್ಕೆ ಹೊರಟ ಯಶವಂತಪುರ– ಮಂಗಳೂರು ರೈಲು ಸಂಚಾರವನ್ನು ಹಾಸನದಲ್ಲೇ ಮೊಟುಕುಗೊಳಿಸಲಾಗಿದೆ. ಬೆಂಗಳೂರು–ಕಣ್ಣೂರು ರೈಲು ಸಂಚಾರವನ್ನು ಜೋಲಾರಪೇಟೆ– ಪಾಲ್ಘಾಟ್–ಶೋರ್ನೂರ್‌–ಮಂಗಳೂರು ಮಾರ್ಗದಲ್ಲಿ ಸಂಚರಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Post Comments (+)