ಮಂಗಳವಾರ, ಆಗಸ್ಟ್ 20, 2019
22 °C

ಮೆಟ್ರೊ ಸ್ಮಾರ್ಟ್‌ಕಾರ್ಡ್‌: ಆನ್‌ಲೈನ್‌ ಟಾಪ್‌ ಅಪ್‌ ಸದ್ಯಕ್ಕೆ ಸ್ಥಗಿತ

Published:
Updated:

ಬೆಂಗಳೂರು: ಆನ್‌ಲೈನ್‌ನಲ್ಲಿ ಮೆಟ್ರೊ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಅಥವಾ ಟಾಪ್‌ಅಪ್‌ ಮಾಡಿಕೊಳ್ಳುವ ವೇಳೆ ತಾಂತ್ರಿಕ ಕಾರಣದಿಂದ ಸಮಸ್ಯೆ ಎದುರಿಸಿದ ಪ್ರಯಾಣಿಕರು ಮೆಟ್ರೊ ನಿಲ್ದಾಣದ ಟಿಕೆಟ್‌ ಕೌಂಟರ್‌ಗಳಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬಹುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ತಿಳಿಸಿದೆ. 

‘ಆನ್‌ಲೈನ್‌ನಲ್ಲಿ ಸ್ವಯಂಚಾಲಿತವಾಗಿ ಟಾಪ್‌ ಅಪ್‌ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ಸೂಚನೆ ನೀಡುವವರೆಗೆ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಬಾರದು’ ಎಂದು ನಿಗಮ ವಿನಂತಿಸಿದೆ.

ಬಿಎಂಆರ್‌ಸಿಎಲ್‌ ವೆಬ್‌ಸೈಟ್‌, ಕರ್ನಾಟಕ ಮೊಬೈಲ್‌ ಒನ್‌ ಅಪ್ಲಿಕೇಶನ್‌ ಮತ್ತು ‘ಬ್ಯಾಂಕ್‌ ಆಟೊ’ ಮೂಲಕ ಆನ್‌ಲೈನ್‌ನಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಬಹುದಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಜುಲೈ 29ರಿಂದ ಆನ್‌ಲೈನ್‌ನಲ್ಲಿ ಟಾಪ್‌ ಅಪ್‌ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜುಲೈ 29ರಿಂದ ಆಗಸ್ಟ್‌ 3ರವರೆಗೆ ಒಟ್ಟು 3,092 ಪ್ರಯಾಣಿಕರು ಟಾಪ್‌ ಮಾಡಿಕೊಳ್ಳಲಾಗದೆ ಸಮಸ್ಯೆ ಎದುರಿಸಿದ್ದರು.

‘3,092 ಪ್ರಕರಣಗಳನ್ನು ಸೋಮವಾರ ಬಗೆಹರಿಸಲಾಗಿದೆ. ಈ ಪ್ರಯಾಣಿಕರು ಮೆಟ್ರೊ ನಿಲ್ದಾಣದ ಟಿಕೆಟ್‌ ಕೌಂಟರ್‌ಗಳಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ’ ಎಂದು ನಿಗಮ ಹೇಳಿದೆ. 

ಮೆಟ್ರೊ ನಿಲ್ದಾಣಗಳಲ್ಲಿನ ಟಿಕೆಟ್‌ ಕೌಂಟರ್‌ಗಳಲ್ಲಿ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದು ನಿಗಮ ತಿಳಿಸಿದೆ.

Post Comments (+)