ಶನಿವಾರ, ಆಗಸ್ಟ್ 24, 2019
27 °C
10 ವರ್ಷಗಳಲ್ಲಿ ಸಾಲ ಮರುಪಾವತಿ

ಬ್ಯಾಂಕ್‌ಗಳ ಜತೆಗೆ ಬಿಐಎಎಲ್ ಹಣಕಾಸು ಒಪ್ಪಂದ

Published:
Updated:

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಮೂಲಸೌಕರ್ಯ ವಿಸ್ತರಣೆ, ಟರ್ಮಿನಲ್– 2 ಹಾಗೂ ಸಂಬಂಧಿತ ಯೋಜನೆಗಳಿಗೆ ವಿವಿಧ ಬ್ಯಾಂಕ್‌ಗಳೊಂದಿಗೆ ₹13,352 ಕೋಟಿ ಮೊತ್ತದ ಹಣಕಾಸು ಒಪ್ಪಂದವನ್ನು ಅಂತಿಮಗೊಳಿಸಿದೆ.

ಆ್ಯಕ್ಸಿಸ್‌ ಬ್ಯಾಂಕ್, ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಒಕ್ಕೂಟದಿಂದ ಬಿಐಎಎಲ್‌ ವಿವಿಧ ಯೋಜನೆಗಳಿಗೆ ₹10,206 ಕೋಟಿ ಸಾಲವನ್ನು ಪಡೆಯಲಿದೆ. 2021ರಲ್ಲಿ ಪೂರ್ಣಗೊಳ್ಳುವ ಯೋಜನೆಗಳಿಗೆ ಎಸ್‌ಬಿಐ ₹5,100 ಕೋಟಿ ಹಾಗೂ ಆ್ಯಕ್ಸಿಸ್ ಬ್ಯಾಂಕ್ ₹5,106 ಕೋಟಿ ಮಂಜೂರು ಮಾಡಿದೆ. 10 ವರ್ಷಗಳಲ್ಲಿ ಈ ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಲಿದೆ. 

ಬಿಐಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರಾರ್, ‘ನಿಗದಿತ ಗಡುವಿನೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ನಮ್ಮದು ಅಂತರರಾಷ್ಟ್ರಿಯ ಮಟ್ಟದಲ್ಲಿ ಅತ್ಯತ್ತುಮ ವಿಮಾನ ನಿಲ್ದಾಣವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದ್ದಾರೆ. 

‘ಜನರು ಮೆಚ್ಚುವಂತಹ ಕಾರ್ಯ ಇದಾಗಿದೆ. 2018–19ನೇ ಆರ್ಥಿಕ ವರ್ಷದಲ್ಲಿ 3.3 ಕೋಟಿ ಜನರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ವರ್ಷಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಲಿದೆ’ ಎಂದು ಮಾಹಿತಿ ನೀಡಿದರು. 

ಎಸ್‌ಬಿಐ ಉಪ ವ್ಯವಸ್ಥಾಪಕ ನಿರ್ದೇಶಕ (ಡಿಎಂಡಿ) ಪಿ.ಎನ್. ಪ್ರಸಾದ್, ‘ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡುವಲ್ಲಿ ನಮ್ಮ ಬ್ಯಾಂಕ್ ಮುಂಚೂಣಿಯಲ್ಲಿದೆ. ರಸ್ತೆ, ರೈಲು, ವಿಮಾನ, ವಿದ್ಯುತ್, ಇಂಧನ ಮುಂತಾದ ಮೂಲಸೌಕರ್ಯ ಯೋಜನೆಗಳಿಗೆ ಈ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದೇವೆ’ ಎಂದು ತಿಳಿಸಿದರು. 

ಆ್ಯಕ್ಸಿಸ್‌ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಆನಂದ್, ‘ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣದ ಮೂಲಸೌಕರ್ಯ ಯೋಜನೆಯ ಭಾಗವಾಗುತ್ತಿರುವುದು ಸಂತೋಷ ನೀಡಿದೆ. ಸಾಲ ಸೌಲಭ್ಯ ಒದಗಿಸುವುದರಿಂದ ಬ್ಯಾಂಕ್‌ನ ಹಿರಿಮೆಯೂ  ಹೆಚ್ಚುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.

Post Comments (+)