ಬುಧವಾರ, ಆಗಸ್ಟ್ 21, 2019
28 °C

ಭಾರತದ ಕ್ರಿಕೆಟ್‌ ಅನ್ನು ದೇವರೇ ಕಾಪಾಡಬೇಕು: ಸೌರವ್ ಗಂಗೂಲಿ

Published:
Updated:
Prajavani

ನವದೆಹಲಿ: ‘ಭಾರತದ ಕ್ರಿಕೆಟ್‌ ಅನ್ನು ದೇವರೇ ಕಾಪಾಡಬೇಕು’ ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಹಿತಾಸಕ್ತಿ ಉಲ್ಲಂಘನೆ ಸಂಘರ್ಷ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಬಿಸಿಸಿಐ ಒಂಬುಡ್ಸ್‌ಮನ್‌ ನೋಟಿಸ್ ನೀಡಿರುವುದನ್ನು ಗಂಗೂಲಿ ವಿರೋಧಿಸಿದ್ದಾರೆ. 

ಈ ಬಗ್ಗೆ ಖಾರವಾಗಿ ಟ್ವೀಟ್ ಮಾಡಿರುವ ಅವರು, ‘ಭಾರತದ ಕ್ರಿಕೆಟ್‌ನಲ್ಲಿ ಈಗ ಹೊಸದೊಂದು ಫ್ಯಾಷನ್ ಶುರುವಾಗಿದೆ. ಹಿತಾಸಕ್ತಿ ಸಂಘರ್ಷ ಎಂಬ ಪ್ರಹಸನ ಅದು. ಸದಾ ಸುದ್ದಿಯಲ್ಲಿರಲು ಇದೊಂದು ಸಾಧನವಾಗಿದೆ. ದ್ರಾವಿಡ್‌ಗೆ ನೋಟಿಸ್ ನೀಡಿದ್ದಾರೆ’ ಎಂದಿದ್ದಾರೆ.

ಗಂಗೂಲಿಯನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಹರಭಜನ್ ಸಿಂಗ್, ‘ಈ ಪರಿಸ್ಥಿತಿಯು ಎಲ್ಲಿಗೆ ಹೋಗಿ ಮುಟ್ಟುವುದೋ ಗೊತ್ತಿಲ್ಲ. ದಿಗ್ಗಜ ಆಟಗಾರರಿಗೆ ನೋಟಿಸ್ ನೀಡುವುದೆಂದರೆ ಅವರನ್ನು ಅವಮಾನಿಸದಂತೆ. ಅವರ ಸೇವೆಯು ಕ್ರಿಕೆಟ್‌ ಬೆಳವಣಿಗೆಗೆ ಅಗತ್ಯವಾಗಿದೆ. ಹೌದು; ಕ್ರಿಕೆಟ್‌ ಅನ್ನು ದೇವರೇ ಕಾಪಾಡಬೇಕು’ ಎಂದಿದ್ದಾರೆ.

Post Comments (+)