ಬುಧವಾರ, ಆಗಸ್ಟ್ 21, 2019
27 °C

₹ 40 ಲಕ್ಷ ಮೌಲ್ಯದ ಬಟ್ಟೆ ವಶ

Published:
Updated:
Prajavani

ಬೆಂಗಳೂರು: ಕೆ.ಜಿ. ನಗರದ ನಾಲ್ಕನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಿತ ಕಂಪನಿಗಳ ಲೇಬಲ್ ಹಚ್ಚಿ‌ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಒಬ್ಬನನ್ನು ಬಂಧಿಸಿ ₹ 40 ಲಕ್ಷ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ವೈಭವ್ ಬಂಧಿತ ಆರೋಪಿ. ‘ಇಎಲ್‌–ಯುನಿಕೊ’ ಎಂಬ ಹೆಸರಿನ ತನ್ನ ಬಟ್ಟೆ ಅಂಗಡಿಯಲ್ಲಿ, ಪೆಪೆ ಜೀನ್ಸ್, ಲೆವಿಸ್‌, ಬೆನೆಟನ್‌, ಯು.ಎಸ್‌. ಪೋಲೊ ಸೇರಿದಂತೆ ವಿವಿಧ ಬ್ರಾಂಡ್‌ಗಳ ಲೇಬಲ್‌ಗಳನ್ನು ಶರ್ಟ್‌, ಪ್ಯಾಂಟು ಮತ್ತಿತರ ಬಟ್ಟೆಗಳಿಗೆ ಹಚ್ಚಿ ವೈಭವ್‌ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಇದರ ಆಧಾರದಲ್ಲಿ, ಅಪರಾಧ ವಿಭಾಗದ ನೂತನ ಹೆಚ್ಚುವರಿ ಕಮಿಷನರ್‌ ಸಂದೀಪ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಕೆಂಪೇಗೌಡ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)