ಭಾನುವಾರ, ಆಗಸ್ಟ್ 18, 2019
24 °C

ರಸ್ತೆಯಲ್ಲಿ ಕೆಸರು: ಸವಾರರು ಹೈರಾಣ!

Published:
Updated:

ಬೆಂಗಳೂರು: ಕೆ.ಆರ್‌. ಮಾರ್ಕೆಟ್‌ ಮೇಲ್ಸೇತುವೆ ಕೆಳಗೆ ಕಬ್ಬಿನ ಮಂಡಿ ಬಳಿ ಬುಧವಾರ ಬೆಳಿಗ್ಗೆ ರಸ್ತೆಯುದ್ದಕ್ಕೂ ಹರಡಿದ್ದ ಕೆಸರಿನಿಂದಾಗಿ ಹಲವು ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಬಿದ್ದವು.

ರಸ್ತೆ ಪಕ್ಕದಲ್ಲಿದ್ದ ಸೊಪ್ಪು ಎಸೆದಿದ್ದರಿಂದ ಉಂಟಾಗಿದ್ದ ಕೆಸರು, ನಸುಕಿನಲ್ಲಿ ಸುರಿದ ತುಂತುರು ಮಳೆಯಿಂದಾಗಿ ರಸ್ತೆಯಲ್ಲಿ ಹರಡಿಕೊಂಡಿತ್ತು. ಕಚೇರಿ ಕೆಲಸಗಳಿಗೆ ತೆರಳುವ ಧಾವಂತದಲ್ಲಿದ್ದ ಹಲವು ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಹಾದು ಹೋಗುವಾಗ ಉರುಳಿ ಬಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಇದರಿಂದಾಗಿ ಕೆಲಹೊತ್ತು ಈ ರಸ್ತೆಯಲ್ಲಿ ವಾಹನ ದಟ್ಟಣೆಯೂ ಉಂಟಾಯಿತು.

ಈ ಸಮಯದಲ್ಲಿ ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಬಿದ್ದವರ ನೆರವಿಗೆ ಧಾವಿಸಿದರು. ವಾಹನಗಳು ಸ್ಕಿಡ್‌ ಆಗುತ್ತಿದ್ದ ಜಾಗದಲ್ಲಿ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು ದ್ವಿಚಕ್ರ ವಾಹನಗಳ ವೇಗಕ್ಕೆ ಕಡಿವಾಣ ಹಾಕಿದರು. ಅಲ್ಲದೆ, ಕೆಸರುಮಯವಾಗಿದ್ದ ರಸ್ತೆಯುದ್ದಕ್ಕೂ ಜಲ್ಲಿ ಪುಡಿ ಸುರಿದರು.

Post Comments (+)