ಸೋಮವಾರ, ಆಗಸ್ಟ್ 19, 2019
21 °C

ಸ್ನಾತಕೋತ್ತರ ಕೋರ್ಸ್‌: ಶುಲ್ಕ ಪರಿಷ್ಕರಣೆ

Published:
Updated:

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಡೆಯುತ್ತಿರುವ ಎಂಬಿಎ, ಎಂಸಿಎ ಸಹಿತ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಪರಿಷ್ಕರಿಸಿ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಶುಲ್ಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶುಲ್ಕ ಹೊರತುಪಡಿಸಿದ ವಾರ್ಷಿಕ ₹2,500 ಮಿತಿಯೊಳಗೆಯೇ ಶುಲ್ಕ ಇರಲಿದೆ. ಆದರೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ₹20 ಸಾವಿರ ಶುಲ್ಕವೇ ಈ ಬಾರಿಯೂ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

 

Post Comments (+)