ಸೋಮವಾರ, ಆಗಸ್ಟ್ 26, 2019
21 °C
ಸಂಚಾರ ನಿಯಮ ಉಲ್ಲಂಘನೆ

ಹದಿನೈದು ದಿನದಲ್ಲೇ ₹ 98.27 ಲಕ್ಷ ದಂಡ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ದಂಡದ ಮೊತ್ತ ಹೆಚ್ಚಳ ಮಾಡಿ ಹದಿನೈದು ದಿನವಾಗಿದ್ದು, ಸಂಚಾರ ಪೊಲೀಸರು ದಂಡರೂಪದಲ್ಲಿ ₹ 98.27 ಲಕ್ಷ  ವಸೂಲಿ ಮಾಡಿದ್ದಾರೆ.

‘ಹೊಸ ಆದೇಶದಂತೆ ಜುಲೈ 24ರಿಂದ ಆಗಸ್ಟ್ 7ರವರೆಗೆ 12,483 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಿಷ್ಕೃತ ದಂಡದ ಮೊತ್ತವನ್ನೇ ತಪ್ಪಿತಸ್ಥ ಚಾಲಕರಿಂದ ವಸೂಲಿ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.

‘ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ನಿಯಮ ಉಲ್ಲಂಘನೆ ನಿಯಂತ್ರಿಸಲು ದಂಡದ ಮೊತ್ತ ಹೆಚ್ಚಿಸಲಾಗಿದೆ. ಜನರು ನಿಯಮ ಪಾಲಿಸಬೇಕು’ ಎಂದು ಕೋರಿದರು.

Post Comments (+)