ಬುಧವಾರ, ಆಗಸ್ಟ್ 21, 2019
22 °C

ದ್ಯುತಿಗೆ ವೀಸಾ

Published:
Updated:
Prajavani

ನವದೆಹಲಿ (ಪಿಟಐ): ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವ ಸಲುವಾಗಿ ಯೂರೋಪ್‌ನ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ದ್ಯುತಿ ಚಾಂದ್‌ ಅವರಿಗೆ ಶುಕ್ರವಾರ ವೀಸಾ ಮಂಜೂರಾಗಿದೆ.

ಗುರುವಾರ ವೀಸಾ ನೀಡುವಂತೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಲ್ಲಿ ದ್ಯುತಿ ಮನವಿ ಮಾಡಿಕೊಂಡಿದ್ದರು. 

ದ್ಯುತಿ ಅವರು ಇತ್ತೀಚೆಗೆ ನಡೆದ ವಿಶ್ವ ಯುನಿವರ್ಸೇಡ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ ಎನಿಸಿಕೊಂಡಿದ್ದರು.

ಐಎಎಎಫ್‌ ಅನುಮೋದಿತ ಎರಡು ಸ್ಪರ್ಧೆಗಳಲ್ಲಿ ಅವರು ಭಾಗವಹಿಸಬೇಕಿದೆ. ಆಗಸ್ಟ್‌ 13ರಂದು ಐರ್ಲೆಂಡ್‌ನಲ್ಲಿ ಹಾಗೂ ಆಗಸ್ಟ್‌ 19ರಂದು ಜರ್ಮನಿಯಲ್ಲಿ ಈ ಸ್ಪರ್ಧೆಗಳು ನಡೆಯಲಿವೆ.

Post Comments (+)