ಮಂಗಳವಾರ, ಆಗಸ್ಟ್ 20, 2019
21 °C

ಪಿ.ಜಿ. ಆತಿಥ್ಯವಲ್ಲ, ಶೋಷಣೆ: ಒಳನೋಟ ಪ್ರತಿಕ್ರಿಯೆಗಳು

Published:
Updated:

ರಾಜ್ಯದ ಪ್ರಮುಖ ನಗರಗಳಲ್ಲಿ ತಲೆ ಎತ್ತಿರುವ ‘ಪೇಯಿಂಗ್‌ ಗೆಸ್ಟ್‌’ಗಳು (ಪಿ.ಜಿ) ನಿರುದ್ಯೋಗಿಗಳು ಹಾಗೂ ಅವಿವಾಹಿತರ ಪಾಲಿಗೆ ನರಕದ ತಾಣವಾಗಿ ಮಾರ್ಪಟ್ಟಿವೆ. ಇಲ್ಲಿನ ಚಟುವಟಿಕೆಗಳ ಬಗ್ಗೆ ‘ಪ್ರಜಾವಾಣಿ’ ಭಾನುವಾರದ (ಆಗಸ್ಟ್‌ 11) ‘ಒಳನೋಟ’ ಅಂಕಣದಲ್ಲಿ ‘ಪಿ.ಜಿ: ಆತಿಥ್ಯವಲ್ಲ, ಶೋಷಣೆ’ ಶೀರ್ಷಿಕೆಯಲ್ಲಿ ಪ್ರಕಟವಾದ ಸಮಗ್ರ ವರದಿಗೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಆಶ್ರಯದ ಕೂಪಗಳು

ಪಿ.ಜಿ.ಗಳಲ್ಲಿ ಮೂಲಸೌಕರ್ಯಗಳು ಹೆಸರಿಗೆ ಮಾತ್ರ ಇರುತ್ತವೆ. ಮಾಲೀಕರು ಹಿಟ್ಲರ್‌ಗಳಂತೆ ದರ್ಪ ತೋರುತ್ತಾರೆ. ಅಲ್ಪ ಸಂಬಳದ ಬಹುಪಾಲನ್ನು ಇವುಗಳ ಮೇಲೆ ಸುರಿಯಬೇಕು. ಹಣ ಕೊಟ್ಟರೂ ಪಿ.ಜಿ.ಗಳಲ್ಲಿ ನೆಮ್ಮದಿ ಸಿಗುವುದಿಲ್ಲ. 

ಎಂ.ಜೆ.ಕೋಕಿಲಾ, ಚಿತ್ರದುರ್ಗ

***

ತಂಡ ರಚನೆಯಾಗಲಿ

ಎಲ್ಲೆಡೆ ಪಿ.ಜಿ. ಫಲಕಗಳದ್ದೇ ಕಾರುಬಾರು. ಇಂದು ಬಹುತೇಕ ಮನೆಗಳು ಪಿ.ಜಿ.ಗಳಾಗಿ ಪರಿವರ್ತನೆಗೊಂಡಿವೆ. ವಾರಕ್ಕೊಮ್ಮೆ ಪಿ.ಜಿ ತಪಾಸಣೆಗೆ ಸರ್ಕಾರದ ಮಟ್ಟದಲ್ಲಿ ತಂಡ ರಚನೆಯಾದರೆ ಮಾಲೀಕರ ಮೇಲೆ ನಿಯಂತ್ರಣ ಸಾಧಿಸಬಹುದು. 

ವೈ.ಎಚ್.ಅಂಗಡಗೇರಿ, ತಾಳಿಕೋಟಿ

***

ಸರ್ಕಾರಿ ಪಿ.ಜಿ ಅಗತ್ಯವಿದೆ

ಸರ್ಕಾರವೇ ನಗರದಲ್ಲಿ ಪಿ.ಜಿ. ವ್ಯವಸ್ಥೆ ಮಾಡುವುದು ಉತ್ತಮ. ಕಡಿಮೆ ದರದಲ್ಲಿ ಪಿ.ಜಿ. ಲಭ್ಯವಾದರೆ ಯವಕ, →ಯುವತಿಯರಿಗೆ →ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ →ಗಮನ ಹರಿಸಲಿ. ಇದರಿಂದ ಪಿ.ಜಿ ಉದ್ಯಮಕ್ಕೆ ಕಡಿವಾಣ ಹಾಕಬಹುದು.

ಶಿವು, ಕೂಡ್ಲಿಗಿ

***

ಅಸಹಾಯಕತೆ ಅನಾವರಣ

ಒಳನೋಟ ವರದಿ ಮನಕಲಕುವಂತಿದೆ. ಈ ರೀತಿಯ ಅವ್ಯವಸ್ಥೆಗಳಲ್ಲಿ ಯುವತಿಯರು ಎದುರಿಸುವ ನರಕಯಾತನೆ ವರದಿ ಕಣ್ಣ ಮುಂದಿಟ್ಟಿದೆ. ಉದ್ಯೋಗದ ಬೆನ್ನತ್ತಿ ಹೋದ ಯುವತಿಯರು ನರಕದಿಂದ ಮತ್ತೆ ಮರಳಲಾಗದ ಅಸಹಾಯಕ ಸ್ಥಿತಿಯ ಅನಾವರಣವಾಗಿದೆ.

ಬಿ.ಕೆ.ಸುಧಾ, ವಿಜಯಪುರ

***

ಯುವತಿಯರಿಗೆ ರಕ್ಷಣೆಯಿಲ್ಲ

ನೌಕರಿಗಾಗಿ ನಗರಕ್ಕೆ ಕಾಲಿಡುವ ಯುವತಿಯರಿಗೆ ಪಿ.ಜಿ.ಗಳು ಆಶ್ರಯ ನೀಡಿದರೂ, →ಅವ್ಯವಸ್ಥೆ ನರಕ ಯಾತನೆ ಆಗಿದೆ. ಅಸಹಾಯಕ ಯುವತಿಯರ →ಜೀವನದ ಜೊತೆಗೆ ಮಾಲೀಕರು ಆಟ ಆಡುತ್ತಾರೆ.

ಕುಪೇಂದ್ರ ವಠಾರ್, ಯಾದಗಿರಿ

***

ನರಕಕ್ಕೆ ಹಣ ಪಾವತಿ

ಪಿ.ಜಿ.ಗಳಲ್ಲಿ ಉಳಿಯುವ ಯುವತಿಯರ ಪಾಡು ಬೇಡಿಹಾಕಿಕೊಂಡ ಕೈದಿಗಳಂತಾಗಿದೆ.  ಅಲ್ಲಿನ ಆಹಾರ ಜೈಲಿಗಿಂತ ಕಳಪೆ.

ಕೆಲವೊಮ್ಮೆ ನರಕಕ್ಕೆ ಹಣ ಪಾವತಿಸಿ ಸೇರಿಕೊಂಡ ಭಾವನೆ ಮೂಡುತ್ತದೆ.  ಇದರಿಂದ ಯುವತಿಯರನ್ನು ರಕ್ಷಿಸುವ ಕೆಲಸ ಆಗಬೇಕಿದೆ. 

ಜ್ಯೋತಿ, ಹಾವೇರಿ

***

ಪರವಾನಗಿ ನೀಡಬೇಕು

ಪಿ.ಜಿ ತೆರೆಯಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಪರವಾನಗಿ ನೀಡಬೇಕು. ತಿಂಗಳಾಂತ್ಯದಲ್ಲಿ ಸಾಲ ವಸೂಲಿಗಾರ ರಂತಿರುವ ಪಿ.ಜಿ. ಮಾಲೀಕರ ಮೇಲೆ ಕ್ರಮ ಜರುಗಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ಹಣ ಪಡೆಯುವ ಪಿ.ಜಿ.ಗಳನ್ನು ಕೂಡಲೇ ಮುಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು.

ಶ್ವೇತಾ, ಸಾಗರ

***

ಶೌಚಾಲಯಕ್ಕಾಗಿ ಪರದಾಟ

ಬೆಂಗಳೂರಿನ ನಾನು ಉಳಿದಿದ್ದ ಪಿ.ಜಿ.ಯಲ್ಲಿ 50 ಯುವತಿಯರಿದ್ದರು. ಇಷ್ಟು ಮಂದಿಗೆ ಕೇವಲ ಎರಡು ಶೌಚಾಲಯಗಳಿದ್ದವು.

ಮುಂಗಡ ಹಿಂದಿರುಗಿಸುವ ಭರವಸೆ ನೀಡಿ ಕೊನೆಗೂ ಹಣ ನೀಡದೆ ಕೈಬಿಡುತ್ತಾರೆ.  ಇಂತಹ ಅವ್ಯವಸ್ಥೆಗಳು ಎಲ್ಲ ಪಿ.ಜಿ.ಗಳಲ್ಲೂ ಇವೆ. ಇದನ್ನು ಹೋಗಲಾಡಿಸಲು ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು. →→

ಐಶ್ವರ್ಯಾ, ಬೆಳಗಾವಿ

Post Comments (+)