ಶುಕ್ರವಾರ, ಆಗಸ್ಟ್ 23, 2019
21 °C
ಶೀಲ ಶಂಕಿಸಿದ್ದಕ್ಕೆ ಕೃತ್ಯವೆಸಗಿರುವುದಾಗಿ ಪತ್ನಿ ಹೇಳಿಕೆ

ಕಲ್ಲು ಎತ್ತಿಹಾಕಿ ಪತಿಯ ಕೊಲೆ

Published:
Updated:

ಬೆಂಗಳೂರು: ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಕೃಷ್ಣಮೂರ್ತಿ (35) ಎಂಬುವರನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಆ ಸಂಬಂಧ ಪತ್ನಿ ಮಾಧವಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೃಷ್ಣಮೂರ್ತಿ, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕಾರು ಚಾಲ ಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಮಾಧವಿ ಜೊತೆ ಟಿ.ಸಿ.ಪಾಳ್ಯದಲ್ಲಿ ವಾಸ ವಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅಜ್ಜ–ಅಜ್ಜಿ ಊರಿ ನಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಶುಕ್ರವಾರ ತಡರಾತ್ರಿ ಕೃಷ್ಣಮೂರ್ತಿ ಮನೆಯಲ್ಲಿ ಮಲಗಿರುವಾಗಲೇ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಾಧವಿ ಕೊಲೆ ಮಾಡಿದ್ದಾಳೆ. ‘ಶೀಲದ ಬಗ್ಗೆ ಅನು ಮಾನ ವ್ಯಕ್ತಪಡಿಸುತ್ತಿದ್ದ ಪತಿ, ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದ.ಆತನ ವರ್ತನೆಯಿಂದ ಬೇಸತ್ತು ಕೊಲೆ ಮಾಡಿದ್ದೇನೆ’ ಎಂಬುದಾಗಿ ಮಾಧವಿ ಹೇಳಿಕೆ ನೀಡಿದ್ದಾಳೆ’ ಎಂದು ಪೊಲೀಸರು ವಿವರಿಸಿದರು. 

‘ಕೃಷ್ಣಮೂರ್ತಿ ಮೃತದೇಹ ಹಾಸಿಗೆಯಲ್ಲೇ ಇತ್ತು. ಶನಿವಾರ ನಸುಕಿ ನಲ್ಲೇ ಮಾಧವಿ, ಮನೆಯಿಂದ ಪರಾರಿಯಾಗಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸ ಲಾಯಿತು’ ಎಂದು ಪೊಲೀಸರು ಹೇಳಿದರು.

ತಲೆಮರೆಸಿಕೊಂಡಿದ್ದ ಮಾಧವಿ ಯನ್ನು ಶನಿವಾರ ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಂಗ ಬಂಧನದಲ್ಲಿದ್ದಾಳೆ.

Post Comments (+)