ಸೋಮವಾರ, ಆಗಸ್ಟ್ 19, 2019
28 °C

ಅಲ್ಲು ಅರ್ಜುನ್‌ ಸಿನಿಮಾದಲ್ಲಿ ತಬು

Published:
Updated:
Prajavani

ಅಲ್ಲು ಅರ್ಜುನ್‌ ಅಭಿನಯದ ಮುಂದಿನ ಚಿತ್ರದಲ್ಲಿ ನಟಿ ತಬು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಮ ಶ್ರೀನಿವಾಸ ನಿರ್ದೇಶಕ.

ಈಚೆಗೆ ತಬು ಬಾಲಿವುಡ್‌ನಲ್ಲಿ ‘ದೇ ದೇ ಪ್ಯಾರ್‌ ದೇ’ ಹಾಗೂ ‘ಭಾರತ್‌’ ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಸೈಫ್‌ ಆಲಿ ಖಾನ್‌, ಆಲಿಯಾ ಅಭಿನಯದ ‘ಜವಾನಿ ಜಾನೆಮನ್‌’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

ಈಗ ಅಲ್ಲು ಅರ್ಜುನ್‌ ಸಿನಿಮಾದಲ್ಲಿ ತಬು ಅಭಿನಯಿಸುವ ಸುದ್ದಿಯನ್ನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಗೀತಾ ಆರ್ಟ್ಸ್‌ ಟ್ವಿಟ್ಟರ್‌ ಮೂಲಕ ಸ್ಪಷ್ಟಪಡಿಸಿದೆ. ಟ್ವೀಟ್‌ನಲ್ಲಿ ‘ಎಎ19 ಸಿನಿಮಾ ಸೆಟ್‌ಗೆ ಹಿರಿಯ ನಟಿ ತಬುಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಅವರು ಸಿನಿಮಾ ಸೆಟ್‌ನಲ್ಲಿ ಚಿತ್ರಕತೆಯನ್ನು ಪರಿಶೀಲನೆ ಮಾಡುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ನವದೀಪ್‌, ಸುಶಾಂತ್‌, ಜಯರಾಂ, ಸತ್ಯರಾಜ್‌ ಹಾಗೂ ಸುನಿಲ್‌ ಪಾತ್ರವರ್ಗದಲ್ಲಿದ್ದಾರೆ

ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. 

Post Comments (+)