ಶುಕ್ರವಾರ, ಆಗಸ್ಟ್ 23, 2019
22 °C

₹ 38,000 ಗಡಿ ದಾಟಿದ ಹಳದಿ ಲೋಹ

Published:
Updated:

ನವದೆಹಲಿ: ದೇಶದ ಪ್ರಮುಖ ಚಿನಿವಾರ ಪೇಟೆಗಳ ವಹಿವಾಟಿನಲ್ಲಿ ಬೆಲೆ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ ಸೋಮವಾರ 10 ಗ್ರಾಂ.ಗೆ ₹ 38,467ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯೂ ಭಾರಿ ಏರಿಕೆ ಕಂಡಿದ್ದು, ಒಂದು ಕೆ.ಜಿಗೆ ₹ 1,150 ಹೆಚ್ಚಳವಾಗಿ ₹43,000ಕ್ಕೆ ತಲುಪಿದೆ. ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ 90 ರೂ ಏರಿಕೆಯೊಂದಿಗೆ 10ಗ್ರಾಂ ಚಿನ್ನದ ಬೆಲೆ ₹38,420 ಆಗಿತ್ತು. ಇದೇ ವೇಳೆ ಬೆಳ್ಳಿ ಬೆಲೆ ಕೆ.ಜಿ.ಗೆ ₹ 140 ಏರಿಕೆಯೊಂದಿಗೆ 44,150 ತಲುಪಿತ್ತು.

ಇದನ್ನೂ ಓದಿ: ಚಿನ್ನದ ಆಮದು ಶೇ 35ರಷ್ಟು ಹೆಚ್ಚಳ

ಇಂದಿನ ಏರಳಿತ
ನಿರಂತರವಾಗಿ ಬೆಲೆ ಏರಿಕೆ–ಇಳಿಕೆ ಕಂಡು ಬರುತ್ತಿದ್ದು, ಸದ್ಯ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 38,120 ರೂಪಾಯಿ ಆಗಿದೆ ಎಂದು bullions.co.in ವರದಿ ಮಾಡಿದೆ.

Post Comments (+)