ಭಾನುವಾರ, ಆಗಸ್ಟ್ 25, 2019
27 °C

ಕಬ್ಬಡಿ: ಹರಿಯಾಣ ಸ್ಟೀಲರ್ಸ್‌ಗೆ ಜಯ

Published:
Updated:

ಅಹಮದಾಬಾದ್‌: ವಿಕಾಸ್‌ ಖಂಡೋಲಾ ಅವರ ಉತ್ತಮ ರೈಡಿಂಗ್ ನೆರವಿನಿಂದ ಹರಿಯಾಣ ಸ್ಟೀಲರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 36–33 ಪಾಯಿಂಟ್‌ಗಳಿಂದ (ವಿರಾಮದ ವೇಳೆ 16–12) ಯು.ಪಿ.ಯೋಧಾ ತಂಡವನ್ನು ಸೋಲಿಸಿತು.

ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವನ್ನು ದಾಖಲಿಸಿದ ಹರಿಯಾಣ ತಂಡ 21 ಪಾಯಿಂಟ್‌ಗಳೊಡನೆ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. 

ಹರಿಯಾಣ ಪರ ಖಂಡೋಲಾ ಎರಡು ಬೋನಸ್‌ ಸೇರಿದಂತೆ 12 ರೈಡಿಂಗ್ ಪಾಯಿಂಟ್‌ ಗಳಿಸಿದರು. ಟ್ಯಾಕ್ಲಿಂಗ್‌ನಲ್ಲಿ ಸುನೀಲ್‌ ಆರು ಪಾಯಿಂಟ್‌ ಪಡೆದರು. ಯೋಧಾ ಪರ ಶ್ರೀಕಾಂತ್‌ ಜಾಧವ್‌ ನಾಲ್ಕು ಬೋನಸ್‌ ಸೇರಿ 9 ಪಾಯಿಂಟ್ಸ್‌ ಗಳಿಸಿದರು.

ಬೆಂಗಾಲ್‌ ವಾರಿಯರ್ಸ್‌ ಇನ್ನೊಂದು ಪಂದ್ಯದಲ್ಲಿ 28–26 ಪಾಯಿಂಟ್‌ಗಳಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಬೆಂಗಾಲ್‌ ತಂಡ 17–12ರಲ್ಲಿ ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು.

ಬೆಂಗಾಲ್‌ ವಾರಿಯರ್ಸ್‌ ಈ ಗೆಲುವಿನಿಂದ ಲೀಗ್‌ನಲ್ಲಿ ಎರಡನೇ (25 ಪಾಯಿಂಟ್‌) ಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್‌ (22 ಪಾಯಿಂಟ್ಸ್‌) ಮೂರನೇ ಸ್ಥಾನಕ್ಕಿಳಿಯಿತು. ದಬಂಗ್ ಡೆಲ್ಲಿ (26) ಅಗ್ರಸ್ಥಾನದಲ್ಲಿದೆ.

ಕೆ.ಪ್ರಪಂಜನ್‌ ಎಂಟು ರೈಡಿಂಗ್‌ ಪಾಯಿಂಟ್ಸ್‌ ಸಂಗ್ರಹಿಸಿದರೆ, ಮಣಿಂದರ್‌ ಸಿಂಗ್‌ ಐದು ಪಾಯಿಂಟ್‌ ಗಳಿಸಿ ವಾರಿಯರ್ಸ್‌ ಪರ ಮಿಂಚಿದರು. ಗುಜರಾತ್‌ ಪರ ಸೋನು ಎಂಟು ರೈಡಿಂಗ್‌ ಪಾಯಿಂಟ್ಸ್‌ ಗಳಿಸಿದರು.

Post Comments (+)