ಶುಕ್ರವಾರ, ನವೆಂಬರ್ 22, 2019
22 °C
ಬಾಟೊ ಚಾಲೆಂಜರ್‌ ಟೆನಿಸ್‌ ಟೂರ್ನಿ

ಟೆನಿಸ್‌: ಮುಕುಂದ್‌ ರನ್ನರ್‌ಅಪ್‌

Published:
Updated:
Prajavani

ಬಾಟೊ, ಚೀನಾ : ಭಾರತದ ಶಶಿಕುಮಾರ್‌ ಮುಕುಂದ್‌ ಅವರು ಬಾಟೊ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಭಾನುವಾರ ಅವರು ಟೂರ್ನಿಯ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ರನ್ನರ್‌ಅಪ್‌ ಆಗಿ ಹೊರಹೊಮ್ಮಿದರು.

12ನೇ ಶ್ರೇಯಾಂಕದ ಮುಕುಂದ್‌, ಸಿಂಗಲ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಅಗ್ರಶ್ರೇಯಾಂಕದ ಆಟಗಾರ ಜೇಮ್ಸ್ ಡಕ್‌ವರ್ತ್‌ ಎದುರು 4–6, 3–6ರಿಂದ ಸೋತರು. ಡಬಲ್ಸ್ ಫೈನಲ್‌ನಲ್ಲಿ ಮುಕುಂದ್‌, ರಷ್ಯಾದ ತೆಯ್ಮುರಜ್‌ ಗಬಾಶ್ವಿಲಿ ಜೊತೆಗೂಡಿ ಕೊರಿಯಾದ ಜಿ ಸಂಗ್‌ ನಮ್‌– ಮಿನ್‌ ಕ್ಯು ಸಾಂಗ್‌ ವಿರುದ್ಧ 6–7, 2–6ರಿಂದ ಸೋತರು.

ಬಾಟೊ ಚಾಲೆಂಜರ್‌ ಟೂರ್ನಿಯಲ್ಲಿ ಬಹುಮಾನವಾಗಿ ₹ 3 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಅವರು ಜೇಬಿಗಿಳಿಸಿದರು. 48 ರ‍್ಯಾಂಕಿಂಗ್‌ ಪಾಯಿಂಟ್‌ಗಳನ್ನು ಸಂಪಾದಿಸಿದರು.

ಪ್ರತಿಕ್ರಿಯಿಸಿ (+)