ಶುಕ್ರವಾರ, ನವೆಂಬರ್ 15, 2019
23 °C

ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ವ್ಯಾಪಾರ

Published:
Updated:
Prajavani

ದಾಬಸ್ ಪೇಟೆ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಅಂಗಡಿ ಮಳಿಗೆಗಳಿಗೆ ಹೂ, ಹಣ್ಣು, ಪೂಜಾ ಸಾಮಗ್ರಿ ಹಾಗೂ ಗಣೇಶ ಮೂರ್ತಿ ಖರೀದಿಸಲು ಭಾನುವಾರ ಬೆಳಿಗ್ಗೆಯಿಂದಲೇ ಮುಗಿಬಿದ್ದರು.ದಾಬಸ್ ಪೇಟೆ ಪಟ್ಟಣದ ಮೇಲ್ಸೇತುವೆ ವೃತ್ತದ ಬಳಿ, ದೊಡ್ಡಬಳ್ಳಾಪುರ, ಕೊರಟಗೆರೆ ರಸ್ತೆಗಳ ಇಕ್ಕೆಲಗಳು, ಪಾದಚಾರಿ ಮಾರ್ಗಗಳಲ್ಲಿ ಅಂಗಡಿಗಳನ್ನು ತೆರೆದು ಹೂವು, ಹಣ್ಣು ಹಾಗೂ ಗಣೇಶ ಮೂರ್ತಿಗಳನ್ನು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಿನಸಿ ಹಾಗೂ ಬಟ್ಟೆ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಯುವಕರು ಗಣೇಶ ಮೂರ್ತಿ ಖರೀದಿಯಲ್ಲಿ ತೊಡಗಿದ್ದರೆ, ಮಹಿಳೆ ಯರು ಹೊಸಬಟ್ಟೆ ಹಾಗೂ ಬಳೆ ಖರೀದಿಯಲ್ಲಿ ತೊಡಗಿದ್ದರು.

ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಏಲಕ್ಕಿ ಬಾಳೆ ₹90, ದಾಳಿಂಬೆ ₹150, ಕಿತ್ತಳೆ ₹100, ಸೇಬು ₹180, ಸಪೋಟ ₹50, ಮೋಸಂಬಿ ₹120ಇತ್ತು. ತೆಂಗಿನ ಕಾಯಿ ಒಂದಕ್ಕೆ ₹30 ಹಾಗೂ ಬಾಳೆ ಕಂಬ ಜೊತೆಗೆ ₹50ರಿಂದ ₹80 ರವರೆಗೆ ಇತ್ತು.

ರಸ್ತೆಗೆ ಹೊಂದಿಕೊಂಡಂತೆ ಅಂಗಡಿಗಳನ್ನು ತೆರೆಯಲಾಗಿದ್ದರಿಂದ ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ಪ್ರತಿಕ್ರಿಯಿಸಿ (+)