ಬುಧವಾರ, ನವೆಂಬರ್ 13, 2019
23 °C

ಚಿನಕವಜ್ರ ಗ್ರಾ.ಪಂ: ರಾಮಣ್ಣ ಉಪಾಧ್ಯಕ್ಷ

Published:
Updated:
Prajavani

ಮಧುಗಿರಿ: ತಾಲ್ಲೂಕು ಕಸಬಾ ವ್ಯಾಪ್ತಿಯ ಚಿನಕವಜ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರಾಮಣ್ಣ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಮಣ್ಣ ನಾಮಪತ್ರ ಸಲ್ಲಿಸಿದ್ದರು. ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಗ್ರೇಡ್ 2 ತಹಶೀಲ್ದಾರ್ ಎ.ತಿಪ್ಪೇಸ್ವಾಮಿ ಅವರು ರಾಮಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಸದಸ್ಯರಾದ ವೀರಭದ್ರಯ್ಯ, ಈರಣ್ಣ, ಬಸವರಾಜು, ಹಸೀನ ಖೌಸರ್, ಪ್ರಕಾಶ್, ಸೀನಪ್ಪ, ಗಿರಿಜಮ್ಮ, ಶಕುಂತಲಾ, ಚುನಾವಣಾ ಶಿರಸ್ತೇದಾರ್ ರಂಗನಾಥ್, ಕಂದಾಯ ನಿರೀಕ್ಷಕ ಜಿ.ಜಯರಾಮಯ್ಯ, ಪಿಡಿಒ ಉತ್ತಮ್, ಮುಖಂಡರಾದ ಗೌರಮ್ಮ, ಪಾಪೀರಣ್ಣ, ಚಿತ್ತಪ್ಪ ಇದ್ದರು.

ಪ್ರತಿಕ್ರಿಯಿಸಿ (+)