ಸೋಮವಾರ, ನವೆಂಬರ್ 18, 2019
20 °C
ಆ್ಯಷಸ್ ಟೆಸ್ಟ್: ನಾಲ್ಕನೇ ಹಣಾಹಣಿ ಇಂದಿನಿಂದ; ಇಂಗ್ಲೆಂಡ್‌ಗೆ ಮರಳಿದ ಓವರ್ಟನ್

ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಬಲ

Published:
Updated:

ಮ್ಯಾಂಚೆಸ್ಟರ್ (ಎಎಫ್‌ಪಿ): ಹೋದ ವಾರ ಬೆನ್ಸ್‌ ಸ್ಟೋಕ್ಸ್‌  ‘ಪವಾಡ’ದಂತಹ ಆಟವನ್ನು ಇನ್ನೂ ಕ್ರಿಕೆಟ್‌ಪ್ರಿಯರು ಮರೆತಿಲ್ಲ. ಅವರ ಆಟದ ಬಲದಿಂದ ಅಮೋಘ ಜಯ ಸಾಧಿಸಿದ ಆತಿಥೇಯ ಇಂಗ್ಲೆಂಡ್ ಅಪಾರ  ಆತ್ಮವಿಶ್ವಾಸದೊಂದಿಗೆ ಮತ್ತೆ ಕಣಕ್ಕೆ ಇಳಿಯಲಿದೆ.

ಬುಧವಾರ ಆ್ಯಷಸ್ ಸರಣಿಯ ನಾಲ್ಕನೇ ಪಂದ್ಯವು ಇಲ್ಲಿ ನಡೆಯಲಿದೆ.  ಇಂಗ್ಲೆಂಡ್‌ಗೆ ತಿರುಗೇಟು ನೀಡಲು ಕಾಯುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ‘ಟ್ರಂಪ್‌ ಕಾರ್ಡ್‌’ ಸ್ಟೀವನ್ ಸ್ಮಿತ್ ಮರಳಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ  ಇಂಗ್ಲೆಂಡ್ ವೇಗಿ ಜೋಫ್ರಾ  ಆರ್ಚರ್ ಅವರ ಚೆಂಡು ಕತ್ತಿಗೆ ಬಡಿದಿದ್ದರಿಂದ ಸ್ಮಿತ್ ಗಾಯಗೊಂಡಿದ್ದರು. ಅದರಿಂದಾಗಿ ಮೂರನೇ ಪಂದ್ಯದಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಮೊದಲ ಟೆಸ್ಟ್‌ನಲ್ಲಿ ಸ್ಮಿತ್ ಎರಡು ಶತಕ ಹೊಡೆದಿದ್ದರು.

ತಂಡಗಳು: ಇಂಗ್ಲೆಂಡ್: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಜೋ ಡೆನ್ಲಿ, ಜೇಸನ್ ರಾಯ್, ಬೆನ್ ಸ್ಟೋಕ್ಸ್‌, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಜೋಸ್ ಬಟ್ಲ್, ಕ್ರೇಗ್ ಓವರ್ಟನ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್.

ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ–ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಮಾರ್ಕೊಸ್ ಹ್ಯಾರಿಸ್,  ಮಾರ್ನರ್ ಲಾಬುಚೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್‌, ಪೀಟರ್ ಸಿಡ್ಲ್, ಮಿಷೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ನೇಥನ್ ಲಯನ್.

ಪಂದ್ಯ ಆರಂಭ: ಮಧ್ಯಾಹ್ನ 3.30

 

 

ಪ್ರತಿಕ್ರಿಯಿಸಿ (+)