ಸೋಮವಾರ, ನವೆಂಬರ್ 18, 2019
23 °C
ರಸ್ತೆ ಗುಂಡಿ ಸಮಸ್ಯೆ: ಗಮನ ಸೆಳದ ವಿಡಿಯೊ

ಹೇರೋಹಳ್ಳಿಯಲ್ಲಿ ಚಂದ್ರಯಾನ!

Published:
Updated:
Prajavani

ಬೆಂಗಳೂರು: ಚಂದ್ರನ ಮೇಲೆ ಮಾನವ ನಡೆದಾಡಿದ ಅನುಭವ ಕಟ್ಟಿಕೊಡುವ ವಿಡಿಯೊ ತುಣುಕೊಂಡು ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಂದಹಾಗೆ ಇದು ಚಂದ್ರನ ಮೇಲೆ ಏನಿದೆ ಎಂಬುದನ್ನು ತೋರಿಸುತ್ತಿಲ್ಲ. ಅದರ ಬದಲು, ಹೊಂಡಗಳಿಂದ ತುಂಬಿದ  ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಎಷ್ಟು ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತಿದೆ. 

ಈ ಪರಿಕಲ್ಪನೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರದು. ಹೇರೋಹಳ್ಳಿ ಮುಖ್ಯರಸ್ತೆಯ ಅವ್ಯವಸ್ಥೆ ಬಗ್ಗೆ ಆಡಳಿತ
ವ್ಯವಸ್ಥೆಯ ಗಮನ ಸೆಳೆಯುವುದಕ್ಕಾಗಿ ಅವರು ಈ ವಿಡಿಯೊ ರೂಪಿಸಿದ್ದಾರೆ.

ನಟ ಪೂರ್ಣಚಂದ್ರ ಅವರು ಗಗನಯಾತ್ರಿಯ ಪೋಷಾಕು ಧರಿಸಿ ಚಂದ್ರನ ಮೇಲ್ಮೈನಲ್ಲಿ ಹಗುರವಾಗಿ ಹೆಜ್ಜೆ ಇಡುವಂತೆ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)