ಶುಕ್ರವಾರ, ನವೆಂಬರ್ 22, 2019
19 °C

ಗಣೇಶನಿಗೆ ಹರಕೆ ತೀರಿಸಿದ ಗೌಸ್‌ ಮೊಹಮದ್ದೀನ್‌

Published:
Updated:
Prajavani

ಆಲಮಟ್ಟಿ: ಮಗಳಿಗೆ ನೌಕರಿ ದೊರೆತರೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತಿದ್ದ ಗೌಸ್‌ ಮೊಹಮದ್ದೀನ್‌ ಈ ಬಾರಿ ₹7,000 ಮೌಲ್ಯದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿಯ ಸಂತೆಕಟ್ಟೆ ಆವರಣದಲ್ಲಿ ಯಾವಾಗಲೂ ಭಾವೈಕ್ಯದ ಗಣೇಶ ಚೌತಿಯನ್ನೇ ಆಚರಿಸಲಾಗುತ್ತದೆ. ಈ ವರ್ಷವೂ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶ ವಿಸರ್ಜನೆ ನೇತೃತ್ವವನ್ನು ಮುಸ್ಲಿಂ ಯುವಕರೇ ವಹಿಸಿಕೊಂಡಿದ್ದಾರೆ.

‘ಮಗಳಿಗೆ ನೌಕರಿ ದೊರೆಯಲಿ ಎಂದು ದೇವರ ಬಳಿ ಮೊರೆ ಇಟ್ಟಿದ್ದರು. ಅವರ ಆಸೆ ಪೂರೈಸಿದೆ. ಹೀಗಾಗಿ ಹರಕೆ ಒಪ್ಪಿಸಲು ಈ ಬಾರಿ ಗಣೇಶ ವಿಗ್ರಹವನ್ನು ಕೊಡಿಸಿದ್ದಾರೆ’ ಎಂದು ಗಜಾನನ ಮಂಡಳಿ ಸದಸ್ಯ ಹಜರತ್‌ ಯರಗಲ್‌ ಹೇಳಿದರು.

ಪ್ರತಿಕ್ರಿಯಿಸಿ (+)