ಶುಕ್ರವಾರ, ನವೆಂಬರ್ 15, 2019
20 °C

ಬೈಕಿಗೆ ಟೆಂಪೊ ಡಿಕ್ಕಿ: ಎಎಸ್‌ಐ ಸಾವು

Published:
Updated:
Prajavani

ಬೆಂಗಳೂರು: ಕೆಎಂಎಫ್‌ ಹಾಲು ಸಾಗಿಸುತ್ತಿದ್ದ ಟೆಂಪೊ ಡಿಕ್ಕಿ ಹೊಡೆದು ಬೈಕ್‌ ಸವಾರ, ಕರ್ತವ್ಯನಿರತ ಎಎಸ್‌ಐ ಮೃತಪಟ್ಟ ಘಟನೆ ಜಕ್ಕೂರು ಬಳಿ ಮಂಗಳವಾರ ರಾತ್ರಿ 10.30ರ ಸುಮಾರಿಗೆ ನಡೆದಿದೆ.

ಯಲಹಂಕದಲ್ಲಿರುವ ಪೊಲೀಸ್‌ ವಸತಿಗೃಹದಲ್ಲಿ ನೆಲೆಸಿರುವ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನವರಾದ ವೆಂಕಟರಾಮು (55) ಮೃತಪಟ್ಟ ದುರ್ದೈವಿ. ಅವರು ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೊ ಚಾಲಕ ಗುರು (24) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜಕ್ಕೂರು ಸರ್ವಿಸ್‌ ರಸ್ತೆಯಲ್ಲಿ ವೇಗವಾಗಿ ಬಂದ ಟೆಂಪೊ, ಎಎಸ್‌ಐ ಅವರ ಬೈಕಿಗೆ ಡಿಕ್ಕಿಹೊಡೆದಿದೆ. ಗಂಭೀರ ಗಾಯ
ಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಉಳಿಯಲಿಲ್ಲ.

ಪ್ರತಿಕ್ರಿಯಿಸಿ (+)