ಬುಧವಾರ, ನವೆಂಬರ್ 13, 2019
23 °C

‘ಮೈಸೂರು ಸ್ಯಾಂಡಲ್’ ಸೋಪಲ್ಲ, ಸಿನಿಮಾ

Published:
Updated:
Prajavani

ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯಲು ಸಿನಿಮಾದ ಶೀರ್ಷಿಕೆಯೂ ಮುಖ್ಯ. ಚಿತ್ತಾಕರ್ಷಕ ಶೀರ್ಷಿಕೆ ಇದ್ದರೆ ಕುತೂಹಲಕ್ಕಾದರೂ ಸಿನಿರಸಿಕರು ಚಿತ್ರಮಂದಿರದತ್ತ ಕಾಲಿಡುತ್ತಾರೆ ಎನ್ನುವುದು ನಿರ್ದೇಶಕರು ಮತ್ತು ನಿರ್ಮಾಪಕರ ಆಶಾಭಾವನೆ. ಗಮಗಮ ಎನ್ನುವ ‘ಮೈಸೂರು ಸ್ಯಾಂಡಲ್‌’ ಎಲ್ಲರಿಗೂ ಗೊತ್ತಿದೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಕನ್ನಡದಲ್ಲಿ ಸೆಟ್ಟೇರುತ್ತಿದೆ.

ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ‘ಮೈಸೂರು ಸ್ಯಾಂಡಲ್‌’ ಚಿತ್ರಕ್ಕೆ ಮುಹೂರ್ತ ನೆರವೇರಿತು.

ರಾಜಪುರಿ (ಗುರುರಾಜ ಶಿವಮೊಗ್ಗ) ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಸ್ಪಲ್ವ ಸಮಯದ ನಂತರ ಕರೆಮಾಡಿ’ ಚಿತ್ರವನ್ನು ನಿರ್ದೇಶಿಸಿರುವ ರಾಜಪುರಿ ಅವರಿಗೆ ಇದು ಎರಡನೆ ಚಿತ್ರ.

ಸಿನಿಮಾ ರಂಗದಲ್ಲಿ ನಿರ್ದೇಶಕರಾಗಬೇಕೆಂದು ಬಂದು ಏನೆಲ್ಲಾ ಅನುಭವ ಪಡೆದರೆಂಬುದನ್ನು ನಾಯಕ, ನಾಯಕಿಯ ಮೂಲಕ ನಿರ್ದೇಶಕರು ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ‘ಮೈಸೂರ್ ಸ್ಯಾಂಡಲ್’ ಚಿತ್ರೀಕರಣ ನಡೆಯಲಿದೆ.

ಎನ್.ಎನ್. ಮೂವೀಸ್ ಆ್ಯಂಡ್ ಜಿ.ಇ.ಎಂ. ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಅಭಯ್ ಪಚ್‍ಪಾಂಡೆ ಈ ಚಿತ್ರಕ್ಕೆ ನಿರ್ಮಿಸುತ್ತಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ಹರ್ಷ ಕೂಗೂಡು ಸಂಗೀತ, ದುರ್ಗ ಪಿ.ಎಸ್. ಸಂಕಲನ, ಅಪ್ಪು ವೆಂಕಟೇಶ್ ಸಾಹಸ, ಶ್ರೀತೇಜ ಸಾಹಿತ್ಯ, ಕಂಬಿರಾಜು ನೃತ್ಯ ನಿರ್ದೇಶನವಿದೆ.

ವಿಶಾಲ್‍ಕುಮಾರ್, ಮಹಿಮಾ, ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಪ್ರಕಾಶ್, ದುರ್ಗಪ್ರಸಾದ್, ಶಾಂತಕುಮಾರ್, ಅರುಣ್, ಶಿವಾಸ್ ಕೆ.ಪಾಣಿ, ಸೀನಂ ಕುಮಾರ್ ತಾರಾಗಣದಲ್ಲಿದ್ದಾರೆ. 

ಪ್ರತಿಕ್ರಿಯಿಸಿ (+)