ಶನಿವಾರ, ನವೆಂಬರ್ 23, 2019
17 °C

ಕಚೇರಿಗೆ ಸಚಿವರ ಅದ್ದೂರಿ ಪ್ರವೇಶ

Published:
Updated:

ಬೆಂಗಳೂರು: ಸಚಿವರಾದ ಆರ್.ಅಶೋಕ, ಬಿ.ಶ್ರೀರಾಮುಲು, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರು ವಿಧಾನ ಸೌಧದಲ್ಲಿ ಗುರುವಾರ ಅದ್ದೂರಿಯಾಗಿ ಕಚೇರಿ ಪ್ರವೇಶ ಕಾರ್ಯ ನೆರವೇರಿಸಿದರು.

ಸಚಿವರಾಗಿ ಎರಡು ವಾರ ಕಳೆದಿದೆ. ವಿಧಾನಸೌಧದಲ್ಲೇ ಸಭೆ ನಡೆಸಿದ್ದರೂ ತಮ್ಮ ಕಚೇರಿಗಳಲ್ಲಿ ಕುಳಿತು ಕೆಲಸ ನಿರ್ವಹಿಸಿರಲಿಲ್ಲ. ಒಳ್ಳೆಯ ಮುಹೂರ್ತ ನೋಡಿ ಪೂಜೆ ನೆರವೇರಿಸಿ ಕಚೇರಿ ಪ್ರವೇಶಿಸಿದ್ದಾರೆ.

ಸಚಿವ ಶ್ರೀರಾಮುಲು ತಮ್ಮ ಕಚೇರಿ ಒಳಗೆ ದೇಗುಲದ ರೀತಿಯಲ್ಲಿ, ಹೂವು, ತಳಿರು ತೋರಣಗಳಿಂದ ಸಿಂಗರಿಸಿದ್ದರು. ಸಚಿವರ ಕ್ಷೇತ್ರದಿಂದ ಬಂದವರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿದ್ದರು.

ಅಶೋಕ ಅವರು ತಮ್ಮನ್ನು ಭೇಟಿ ಮಾಡಿ ಅಭಿನಂದಿಸಲು ಬರುವವರು ಪುಷ್ಪಗುಚ್ಛ, ಹೂವಿನಮಾಲೆ ತರದಂತೆ ಸಲಹೆ ಮಾಡಿದ್ದರು. ಈ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆಯಾಗಿ ಸಂಗ್ರಹಿಸಿದರು.

ಪ್ರತಿಕ್ರಿಯಿಸಿ (+)