ಶನಿವಾರ, ನವೆಂಬರ್ 23, 2019
17 °C

‘ಭದ್ರಾ ಮೇಲ್ದಂಡೆ ಯೋಜನೆ: ಕಾಲುವೆ ನಿರ್ಮಾಣಕ್ಕೆ ಮರು ಟೆಂಡರ್‌’

Published:
Updated:

ಬೆಂಗಳೂರು: ‘ಭದ್ರಾ ಮೇಲ್ಡಂಡೆ ಯೋಜನೆಯ ಚಿತ್ರದುರ್ಗ ವಲಯದ ಕಾಲುವೆ ನಿರ್ಮಾಣಕ್ಕೆ ಮರು ಟೆಂಡರ್‌ ಕರೆದು, ಕಡಿಮೆ ಮೊತ್ತ ನಮೂದಿಸಿದ್ದ ಮೆ.ಸದ್ಭವ್‌ ಎಂಜಿನಿಯರಿಂಗ್‌ ಲಿಮಿಟೆಡ್‌ಗೆ ಕಾಮಗಾರಿಯನ್ನು ವಹಿಸಲಾಗಿದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಜೈಪ್ರಕಾಶ್‌ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ(ಆಗಸ್ಟ್30ರಂದು) ಪ್ರಕಟವಾದ ‘ಅನರ್ಹ ಸಂಸ್ಥೆಗೆ ₹155 ಕೋಟಿಯ ಕಾಮಗಾರಿ’ ಸುದ್ದಿಗೆ ಸ್ಪಷ್ಟನೆ ನೀಡಿರುವ
ಅವರು, ‘ನ್ಯಾಷನಲ್‌ ಪ್ರಾಜೆಕ್ಟ್ಸ್‌ ಕನ್‌ಸ್ಟ್ರಕ್ಷನ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎನ್‌ಪಿಸಿಸಿ) ಸುಳ್ಳು ದಾಖಲೆ ಕೊಟ್ಟಿರುವುದು ಪರಿಶೀಲನೆ ವೇಳೆ ಕಂಡುಬಂತು. ಹಾಗಾಗಿ, ಆ ಸಂಸ್ಥೆಯ ಹೆಸರನ್ನುನಿಗಮದ ನೋಂದಾಯಿತ ಗುತ್ತಿಗೆದಾರರ ಪಟ್ಟಿಯಿಂದ ತೆಗೆದು
ಹಾಕಲಾಗಿದೆ. ಜತೆಗೆ, ಸಂಸ್ಥೆಯ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿಗಮದ ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ (ಹೊಸದುರ್ಗ ವಿಭಾಗ) ಮಾಹಿತಿ ಒದಗಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)