ಗುರುವಾರ , ನವೆಂಬರ್ 21, 2019
27 °C

ಟ್ಯಾಂಕರ್‌ ಹರಿದು ಮಹಿಳೆ ಸಾವು

Published:
Updated:

ಬೆಂಗಳೂರು: ವೈಟ್‌ಫೀಲ್ಡ್ ಸಮೀಪದ ಹಗದೂರು ಬಳಿ ಗುರುವಾರ ರಾತ್ರಿ ನೀರಿನ ಟ್ಯಾಂಕರ್‌ನ ಚಕ್ರ ಮೈ ಮೇಲೆ ಹರಿದಿದ್ದರಿಂದ ಪ್ರೇಮಾ (35) ಎಂಬುವರು ಮೃತಪಟ್ಟಿದ್ದಾರೆ.

ಪ್ರೇಮಾ ಅವರು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅತಿ ವೇಗವಾಗಿ ಟ್ಯಾಂಕರ್ ಚಲಾಯಿಸಿಕೊಂಡು ಬಂದ ಚಾಲಕ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ.

ಪ್ರತಿಕ್ರಿಯಿಸಿ (+)