ಶನಿವಾರ, ನವೆಂಬರ್ 23, 2019
17 °C

ಬ್ರೆಕ್ಸಿಟ್‌ಗೆ ತಡೆ

Published:
Updated:

ಲಂಡನ್‌ (ರಾಯಿಟರ್ಸ್‌):  ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ (ಬ್ರೆಕ್ಸಿಟ್‌) ಒಪ್ಪಂದವನ್ನು ತಡೆಹಿಡಿಯುವಂತೆ ಕೋರುವ ಮಸೂದೆಗೆ ಇಲ್ಲಿನ ಸಂಸತ್‌ ಶುಕ್ರವಾರ ಅನುಮೋದನೆ ನೀಡಿದೆ.

ಇದರಿಂದಾಗಿ ಐರೋಪ್ಯ ಒಕ್ಕೂಟ ದಿಂದ (ಇ.ಯು) ಬ್ರಿಟನ್‌ ಹೊರಬರುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದ್ದು ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಹಿನ್ನಡೆ ಆಗಿದೆ. ಅಕ್ಟೋಬರ್‌ 19ರ ವೇಳೆಗೆ ಇ.ಯುನಿಂದ ಬ್ರಿಟನ್‌ ಹೊರಬರಬೇಕಿತ್ತು.

ಸಂಸತ್‌ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಮತ್ತೆ 3 ತಿಂಗಳ ವಿಸ್ತರಣೆ ಕೋರಬೇಕಾಗುತ್ತದೆ. ಈ ಕಾಯ್ದೆಗೆ ರಾಣಿ ಎಲಿಜಬೆತ್‌ ಸೋಮವಾರ ಸಹಿ ಹಾಕುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)