ಮಂಗಳವಾರ, ನವೆಂಬರ್ 19, 2019
22 °C

ಪಾಕ್: ತ್ರಿವಳಿ ತಲಾಖ್‌ ನಿಷೇಧಕ್ಕೆ ಶಿಫಾರಸು

Published:
Updated:

ಇಸ್ಲಾಮಾಬಾದ್‌(ಪಿಟಿಐ): ತ್ರಿವಳಿ ತಲಾಖ್‌ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿ ಸು ವಂತೆ ಕೌನ್ಸಿಲ್‌ ಆಫ್‌ ಇಸ್ಲಾಮಿಕ್‌ ಐಡಿಯಾಲಜಿ (ಸಿಐಐ) ಸಂಸ್ಥೆ ಪಾಕಿಸ್ತಾನ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯುನ್‌ ಪತ್ರಿಕೆ ವರದಿ ಮಾಡಿದೆ.

ಸಿಐಐ, ಪಾಕಿಸ್ತಾನ ಸರ್ಕಾ ರಕ್ಕೆ ಇಸ್ಲಾಂ ವಿಚಾರಗಳ ಕುರಿತು ಕಾನೂನು ಸಲಹೆ ನೀಡುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸರ್ಕಾರ ತ್ರಿವಳಿ ತಲಾಖ್‌ ನಿಷೇಧಿಸಿದ ಬೆನ್ನಲ್ಲೇ ಈ ಶಿಫಾರಸು ಮಾಡಿದೆ.

ತ್ರಿವಳಿ ತಲಾಖ್‌ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಕಾನೂನನ್ನು ರಾಷ್ಟ್ರೀಯ ಅಸೆಂಬ್ಲಿ ರೂಪಿಸಲಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)