ಸೋಮವಾರ, ನವೆಂಬರ್ 18, 2019
23 °C

‘ಫಿಜಿಟಲ್‌’ ಸೇವೆ ವಿಸ್ತರಣೆಗೆ ‘ಫಿನೊ’ ಅಭಿಯಾನ

Published:
Updated:

ಬೆಂಗಳೂರು: ಪಾವತಿ ಬ್ಯಾಂಕುಗಳಲ್ಲಿ ಒಂದಾಗಿರುವ ‘ಫಿನೊ ಪೇಮೆಂಟ್ಸ್ ಬ್ಯಾಂಕ್‌’, ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ‘ಗಲ್ಲಿ ಗಲ್ಲಿ ಫಿನೊ’ ಅಭಿಯಾನವನ್ನು ಆರಂಭಿಸಿದೆ.

‘ಅಭಿಯಾನದ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 4,000 ಕೇಂದ್ರಗಳನ್ನು ತೆರೆಯುವ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಬಿಪಿಸಿಎಲ್‌) 800 ಕೇಂದ್ರಗಳಲ್ಲಿ ಫಿನೊ ಸೇವೆ ಆರಂಭಿಸುವ ಗುರಿಯಿದೆ’ ಎಂದು ಬ್ಯಾಂಕ್‌ನ ಮಾರಾಟ ವಿಭಾಗದ ಮುಖ್ಯಸ್ಥ ಶೈಲೇಶ್‌ ಪಾಂಡೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಬ್ಯಾಂಕ್‌ನ ನಾಲ್ಕು ಶಾಖೆಗಳಿದ್ದು, 2831 ವ್ಯವಹಾರ ಕೇಂದ್ರಗಳು ಇವೆ. ಇದರಲ್ಲಿ 323 ಬಿಪಿಸಿಎಲ್‌  ಕೇಂದ್ರಗಳು ಸೇರಿವೆ.  ಗ್ರಾಮೀಣ ವಲಯದ ಶೇ 52ರಷ್ಟು ಪಾವತಿ ಬ್ಯಾಂಕಿಂಗ್‌ ಕೇಂದ್ರಗಳು ನಮ್ಮ ಬ್ಯಾಂಕ್‌ಗೆ ಸೇರಿವೆ. ಹಣ ವರ್ಗಾವಣೆ ಮಾಡಲು ಬ್ಯಾಂಕ್‌ಗಳಿಗೆ ಹೋಗಬೇಕಿಲ್ಲ. ಮೊಬೈಲ್‌ನಲ್ಲಿ ‘ಬಿ ಪೇ’ ಅಥವಾ ಸಮೀಪದ ಫಿನೊ ಪಾವತಿ ಬ್ಯಾಂಕ್ ಕೇಂದ್ರದ ಮೂಲಕ ಮಾಡಬಹುದು ಎಂದರು. 

ಪ್ರತಿಕ್ರಿಯಿಸಿ (+)