ಭಾನುವಾರ, ನವೆಂಬರ್ 17, 2019
27 °C

ಆ್ಯಷಸ್: ರೋರಿ, ರೂಟ್ ಅರ್ಧಶತಕ

Published:
Updated:
Prajavani

ಮ್ಯಾಂಚೆಸ್ಟರ್ (ಪಿಟಿಐ/ಎಎಫ್‌ಪಿ): ಇನಿಂಗ್ಸ್‌ನ ಆರಂಭದಲ್ಲಿಯೇ ಎಡವಿದ್ದ ಇಂಗ್ಲೆಂಡ್ ತಂಡಕ್ಕೆ ರೋರಿ ಬರ್ನ್ಸ್‌ ಮತ್ತು ನಾಯಕ ಜೋ ರೂಟ್ ಆಸರೆಯಾದರು.

ಇಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ 497 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 57 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 158 ರನ್ ಗಳಿಸಿದೆ. ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ  ಆಘಾತ ಅನುಭವಿಸಿತು. ಕೇವಲ 25 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಆರಂಭಿಕ ಬ್ಯಾಟ್ಸ್‌ಮನ್ ರೋರಿ ಮತ್ತು ರೂಟ್ ಇನಿಂಗ್ಸ್‌ ಕಟ್ಟಿದರು. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 133 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 497; ಇಂಗ್ಲೆಂಡ್:  57 ಓವರ್‌ಗಳಲ್ಲಿ 2 ವಿಕೆಟ್‌ಗೆ 158 (ರೋರಿ ಬರ್ನ್ಸ್‌ ಬ್ಯಾಟಿಂಗ್ 77, ಜೋ ರೂಟ್ ಬ್ಯಾಟಿಂಗ್ 65) ವಿವರ ಅಪೂರ್ಣ.

 

ಪ್ರತಿಕ್ರಿಯಿಸಿ (+)