ಸೋಮವಾರ, ನವೆಂಬರ್ 18, 2019
27 °C

ವಿಜಯ್ ಕುಮಾರ್‌ ಪಿಟಿಐ ಅಧ್ಯಕ್ಷ

Published:
Updated:
Prajavani

ನವದೆಹಲಿ (ಪಿಟಿಐ): ಪಂಜಾಬ್‌ ಕೇಸರಿ ಪತ್ರಿಕಾ ಸಮೂಹದ ಮುಖ್ಯ ಸಂಪಾದಕ ವಿಜಯ್‌ ಕುಮಾರ್ ಚೋಪ್ರ ಅವರು ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (ಪಿಟಿಐ)ನ ನೂತನ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.

ಈವರೆಗೆ ಹಿಂದೂ ಪತ್ರಿಕೆಯ ಪ್ರಕಾಶಕ ಹಾಗೂ ಮಾಜಿ ಸಂಪಾದಕ ಎನ್‌.ರವಿ ಅವರು ಅಧ್ಯಕ್ಷರಾಗಿದ್ದರು.

ಬೆನೆಟ್‌ ಕೋಲ್ಮನ್ ಅಂಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೀತ್‌ ಜೈನ್‌ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನವದೆಹಲಿಯಲ್ಲಿ ಶುಕ್ರವಾರ ಕಂಪನಿಯ 71ನೇ ಮಹಾಸಭೆಯ ನಂತರ ನಡೆದ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಚುನಾವಣೆ ನಡೆಸಲಾಯಿತು.

ವಿವೇಕ್ ಗೋಯೆಂಕಾ, ಮಹೇಂದ್ರ ಮೋಹನ್‌ ಗುಪ್ತಾ, ಕೆ.ಎನ್‌.ಶಾಂತ ಕುಮಾರ್‌, ರಿಯಾದ್ ಮ್ಯಾಥ್ಯೂ,
ಅವೀಕ್‌ ಕುಮಾರ್ ಸರ್ಕಾರ್, ಎಂ.ಪಿ.ವಿರೇಂದ್ರಕುಮಾರ್, ಆರ್‌.ಲಕ್ಷ್ಮಿಪತಿ, ಹೊರಮುಸ್ಜಿ ಎನ್‌.ಕಾಮಾ, ಪ್ರವೀಣ್‌ ಸೋಮೇಶ್ವರ್‌, ನ್ಯಾಯಮೂರ್ತಿ ಆರ್.ಸಿ.ಲಹೋಟಿ, ದೀಪಕ್‌ ನಯ್ಯರ್‌, ಶ್ಯಾಮ್ ಶರಣ್‌ ಮತ್ತು ಜೆ.ಎಫ್‌. ಪೋಚ್ಖನ್‌ವಾಲಾ ಅವರು ಮಂಡಳಿಯ
ಸದಸ್ಯರಾಗಿದ್ದಾರೆ.

ಪ್ರತಿಕ್ರಿಯಿಸಿ (+)